Spread the love

ಮಲ್ಪೆ: ದಿನಾಂಕ:11-02-2024(ಹಾಯ್ ಉಡುಪಿ ನ್ಯೂಸ್) ಕರ್ತವ್ಯ ನಿರತರಾಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಲ್ಪೆ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ‌ಸುಷ್ಮಾರವರು ದಿನಾಂಕ 10/02/2024 ರಂದು ನೈಟ್‌ ರೌಂಡ್ಸ್‌ ಕರ್ತವ್ಯದಲ್ಲಿ ರಾತ್ರಿ 11:00 ಗಂಟೆಗೆ ಇಲಾಖೆಯ ಜೀಪ್‌ನಲ್ಲಿ ಪೊಲೀಸ್ ಸಿಬ್ಬಂದಿ ಜಾವೇದ್‌ ರವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ತೊಟ್ಟಂ, ಗುಜ್ಜರಬೆಟ್ಟು, ಕದಿಕೆ, ಬಡನಿಡಿಯೂರು ಮುಂತಾದ ಕಡೆ ಸಂಚರಿಸಿಕೊಂಡು ರಾತ್ರಿ ಸುಮಾರು 02:15 ಗಂಟೆ ಸಮಯಕ್ಕೆ ಹೂಡೆ ತಲುಪಿದಾಗ ಹೂಡೆಯ ಶಾಲೆಗುಡ್ಡೆಯ ಬಳಿ 4-5 ಜನರು ದೊಡ್ಡದಾಗಿ ಅವಾಚ್ಯ ಶಬ್ಧಗಳಿಂದ ಬೈಯ್ದಾಡಿಕೊಳ್ಳುತ್ತಿದ್ದು, ಪೊಲೀಸ್ ಜೀಪನ್ನು ನೋಡಿದ ಕೂಡಲೇ 2-3 ಜನರು ಓಡಿ ಹೋಗಿರುತ್ತಾರೆ ಎಂದಿದ್ದಾರೆ.

. ಉಳಿದ 2 ಜನರು ಶಾಲೆಗುಡ್ಡೆಯ ಬಳಿ ನಿಂತುಕೊಂಡು ಪೊಲೀಸ್ ಇಲಾಖೆಯ ಜೀಪಿನ ಬಳಿ ಬಂದು ಒಳಗಡೆಯಿದ್ದ ಪಿಎಸ್ಐ ಹಾಗೂ ಸಿಬ್ಬಂದಿಯನ್ನು ಉದ್ದೇಶಿಸಿ ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಕೂಗಾಡುತ್ತಾ ಅದರಲ್ಲಿದ್ದ ಓರ್ವ ವ್ಯಕ್ತಿಯು ಗಾಂಜಾ ಪ್ರಕರಣದ ಆರೋಪಿ ಸಕ್ಲೇನ್‌ ಎಂಬವ ಎಂದು ಗುರುತಿಸಿ ಹೋಮ್‌ಗಾರ್ಡ್‌ ಜಾವೇದ್‌ ರವರು ಪಿಎಸ್ಐ ರವರಿಗೆ ತಿಳಿಸಿರುತ್ತಾರೆ ಎಂದಿದ್ದಾರೆ..

ಸಕ್ಲೇನ್‌ ಕೂಡಲೇ ಇನ್ನೋರ್ವ ವ್ಯಕ್ತಿಯ ಜೊತೆ ಸೇರಿಕೊಂಡು ಕೈಯಲ್ಲಿ ದೊಡ್ಡ ಶಿಲೆ ಕಲ್ಲನ್ನು ಹಾಗೂ ರಾಡ್‌ ಅನ್ನು ತೆಗೆದುಕೊಂಡು ಬಂದು ನಿಮ್ಮನ್ನು ಸಾಯಿಸಿ ಬಿಡುತ್ತೇನೆ ಎಂದು ಹೇಳುತ್ತಾ ಇಲಾಖೆಯ ಜೀಪಿನ ಹತ್ತಿರಕ್ಕೆ ಬಂದು ಜೀಪಿಗೆ ಅಡ್ಡಗಟ್ಟಿ ಕೈಯಿಂದ ಜೀಪಿನ ಗ್ಲಾಸಿಗೆ ಹೊಡೆದು ಒಳಗಿದ್ದವರ ಪ್ರಾಣಕ್ಕೆ ಕುತ್ತಾಗುವುದು ಎಂಬ ತಿಳುವಳಿಕೆ ಇದ್ದರೂ ಸಹಾ ಪೊಲೀಸರ ಮೇಲೆ ಹೊಡೆಯಲು ಶಿಲೆಕಲ್ಲನ್ನು ಬೀಸಿದಾಗ ಕಲ್ಲು ಜೀಪಿನ ಗ್ಲಾಸಿಗೆ (ಮುಂಭಾಗಕ್ಕೆ) ಬಡಿದು ಜೀಪಿನ ಗ್ಲಾಸಿಗೆ ಡ್ಯಾಮೇಜ್‌ ಆಗಿರುತ್ತದೆ ಎಂದಿದ್ದಾರೆ.

ಇನ್ನೊಂದು ಕಲ್ಲನ್ನು ಜೀಪಿನ ಮೇಲೆ ಬೀಸಿದ್ದು, ಪೊಲೀಸರು ತಪ್ಪಿಸಿಕೊಂಡು ಹೂಡೆಯ ಶಾಲೆಗುಡ್ಡೆ ಏರಿಯಾದಿಂದ ಬಂದಿರುತ್ತಾರೆ ಎನ್ನಲಾಗಿದೆ. ಸಮವಸ್ತ್ರದಲ್ಲಿ ಕರ್ತವ್ಯ ನಿರತರಾಗಿದ್ದ ಪಿಎಸ್ಐ ಯವರ ಮೇಲೆ ಮತ್ತು ಹೋಂ ಗಾರ್ಡ್ ಜಾವೇದ್‌ರವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಇಲಾಖೆಯ ಜೀಪನ್ನು ಅಡ್ಡಗಟ್ಟಿ ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ಬೈಯ್ದು ಜೀಪಿನಲ್ಲಿದ್ದ ಪಿಎಸ್ಐ ಮತ್ತು ಸಿಬ್ಬಂದಿಯನ್ನು ಸಾಯಿಸಿ ಬಿಡುತ್ತೇವೆ ಎಂದು ಹೇಳುತ್ತಾ ಪ್ರಾಣಕ್ಕೆ ಹಾನಿಯಾಗುವುದು ಎಂಬ ತಿಳುವಳಿಕೆ ಇದ್ದರೂ ಸಹಾ ಶಿಲೆಕಲ್ಲನ್ನು ಪೊಲೀಸರ ಕಡೆ ಬೀಸಿ ಇಲಾಖೆಯ ಜೀಪಿಗೆ ಡ್ಯಾಮೇಜ್‌ ಮಾಡಿರುತ್ತಾರೆ ಎಂದು ಪಿಎಸ್ಐ ಯವರು ದೂರು ನೀಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ: 341, 353,504,506,34 IPC & 3 prevention of damage to public property act ರಂತೆ ಪ್ರಕರಣ ದಾಖಲಾಗಿದೆ.

error: No Copying!