ಉಡುಪಿ: ದಿನಾಂಕ :11-02-2024(ಹಾಯ್ ಉಡುಪಿ ನ್ಯೂಸ್) ಕಾರನ್ನು ಬಾಡಿಗೆಗೆ ಪಡೆದು ಕೊಂಡ ಪರಿಚಯಸ್ಥ ರೋರ್ವರು ಕಾರನ್ನು ವಾಪಾಸು ನೀಡದೆ ವಂಚಿಸಿದ್ದಾರೆ ಎಂದು ಕಾರಿನ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ತೆಂಕನಿಡಿಯೂರು ನಿವಾಸಿ ಆರೀಫ್ ಸಾಹೇಬ್ (41) ಎಂಬವರು ಕಾರಿನ ವ್ಯವಹಾರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ, ಅವರು ತನ್ನ ಅಣ್ಣ ಅಜೀಮ್ ಸಾಹೇಬ್ ರವರ ಮಾಲಿಕತ್ವದ ಕಾರು KA-20 Z-4784 , INNOVA 2.5 G.B.S.Ⅱ ನ್ನು ನೋಡಿಕೊಳ್ಳುತ್ತಿದ್ದು, ಆರೀಫ್ ಸಾಹೇಬ್ ರವರಿಗೆ ಮೊದಲಿನಿಂದಲೇ ಪರಿಚಯವಿದ್ದ ಆರೋಪಿ ಟಿ.ಎಸ್ ಜಫ್ರುಲ್ಲಾ ಎಂಬವರು 2020 ರ ಜುಲೈ ತಿಂಗಳಿನಲ್ಲಿ ಬ್ರಹ್ಮಗಿರಿಯ ಅಂಗಡಿಗೆ ಬಂದು ತುರ್ತಾಗಿ ಬೆಂಗಳೂರಿಗೆ ಹೋಗಬೇಕಾಗಿರುವುದರಿಂದ ನಾಲ್ಕು ದಿನದ ಮಟ್ಟಿಗೆ ಕಾರನ್ನು ಬಾಡಿಗೆಗೆ ಕೇಳಿದ್ದು, ಅದಕ್ಕೆ ಆರೀಫ್ ಸಾಹೇಬ್ ರವರು ಕಾರನ್ನು ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಆರೋಪಿ ಟಿ.ಎಸ್.ಜಫ್ರಲ್ಲಾ ನಾಲ್ಕು ದಿನ ಕಳೆದ ನಂತರ ಕಾರನ್ನು ಹಿಂದಿರುಗಿಸಿರುವುದಿಲ್ಲ ಎನ್ನಲಾಗಿದೆ. ಆರೀಫ್ ಸಾಹೇಬ್ ರ ಕಾರನ್ನು ಆರೋಪಿ ಟಿ.ಎಸ್ ಜಫ್ರುಲ್ಲಾ ನು ಬೆಂಗಳೂರಿನ ವ್ಯಕ್ತಿಯೊಬ್ಬರ ಬಳಿ 5 ಲಕ್ಷ ರೂಪಾಯಿಗೆ ಅಡವಿಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಆರೀಫ್ ಸಾಹೇಬ್ ರವರು ಆರೋಪಿ ಜಫ್ರುಲ್ಲಾ ನ ಬಳಿ ಕಾರಿನ ಮೇಲೆ ಉಡುಪಿಯ ಮುದ್ರಕರ ಸೌಹಾರ್ದ ಸೊಸೈಟಿಯಲ್ಲಿ ಸಾಲವಿದ್ದು ಅದನ್ನು ನಾನೇ ಕಟ್ಟುತ್ತಿದ್ದು ಕಾರನ್ನು ವಾಪಸ್ಸು ನೀಡು ಎಂದು ಕೇಳಿದ್ದಾರೆ ಎಂದಿದ್ದಾರೆ.
ಆರೋಪಿ ಜಫ್ರುಲ್ಲಾ ನು ಕಾರನ್ನು ವಾಪಸ್ಸು ನೀಡುವುದಿಲ್ಲ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ,ಜೀವ ಬೆದರಿಕೆ ಹಾಕಿರುತ್ತಾನೆ ಎಂದು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ.
ನ್ಯಾಯಾಲಯದ ಸೂಚನೆಯಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 406, 420, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.