ಕುಂದಾಪುರ: ದಿನಾಂಕ:07-02-2024(ಹಾಯ್ ಉಡುಪಿ ನ್ಯೂಸ್)
ಕುಂದಾಪುರದ ಹೊಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಲಾಸ್ಯ ಮಧ್ಯಸ್ಥ ರಾಜಸ್ಥಾನದ ಜೈಪುರದಲ್ಲಿ ನಡೆದ 67ನೇ ರಾಷ್ಟ್ರಮಟ್ಟದ 14ರ ವಯೋಮಾನದ “ಬಾಲಕಿಯರ ಯೋಗಾಸನ” ಸ್ಪರ್ಧೆಯಲ್ಲಿ ಟಾಪ್ 10 ರಲ್ಲಿ 7ನೇ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾಳೆ. ಅಲ್ಲದೇ ರಾಷ್ಟ್ರಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಕರ್ನಾಟಕವು ಪ್ರಪ್ರಥಮ ಬಾರಿಗೆ 4 ಸ್ಥಾನ ಪಡೆದಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ.
ಇವಳ ಈ ಸಾಧನೆಗೆ ಸಂಸ್ಥೆಯ ಸಂಚಾಲಕರು,ಮುಖ್ಯೋಪಾಧ್ಯಾಯಿನಿಯವರು ಹಾಗೂ ಶಿಕ್ಷಕ ಶಿಕ್ಷಕೇತರ ವೃಂದ ತಂದೆ ತಾಯಿ ಅಭಿನಂದನೆ ಸಲ್ಲಿಸಿದ್ದಾರೆ..
ಪ್ರತಿಭಾವಂತರಾದ ಲಾಸ್ಯಮದ್ಯಸ್ತ ಇವರಿಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಇವಳನ್ನು ಹುಡುಕಿ ಬರಲಿ ಎಂದು ಹಾರೈಸಿದ್ದಾರೆ.