ಮಲ್ಪೆ: ದಿನಾಂಕ:06-02-2024(ಹಾಯ್ ಉಡುಪಿ ನ್ಯೂಸ್) ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಸಭೆಯಲ್ಲಿ ಸದಸ್ಯರ ನಡುವೆ ವಾಕ್ಸಮರ ನಡೆದು ಶಶಿಕುಮಾರ್ ಎಂಬವರಿಗೆ ಹಲ್ಲೆ ನಡೆಸಲಾಗಿದೆ ಎಂದು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಪು, ಮೂಡುಬೆಳ್ಳೆ ನಿವಾಸಿ ಶಶಿಕುಮಾರ್(34) ಎಂಬವರು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಸದಸ್ಯರಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಅನ್ಸರ್ ಅಹಮ್ಮದ್ , ಪ್ರಭಾಕರ , ಜಯ, ಕುಶಲ , ಆಶ್ವಿನಿ , ಸುಧೀರ್ ರವರು ಸದಸ್ಯರಾಗಿರುತ್ತಾರೆ ಎಂದಿದ್ದಾರೆ. ಅನ್ಸರ್ ಅಹಮ್ಮದ್ ಎಂಬವರು ಮೊದಲು ಅಧ್ಯಕ್ಷರಾಗಿದ್ದು, ಪ್ರಸ್ತುತ ಯಾರೂ ಅಧ್ಯಕ್ಷರು ಇರುವುದಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ 03/02/2024 ರಂದು ಪ್ರಭಾಕರರವರು ಶಶಿಕುಮಾರ್ ಅವರಿಗೆ ದಿನಾಂಕ 04/02/2024 ರಂದು ಸಂಜೆ 4:00 ಗಂಟೆಗೆ ಅಂಬಲಪಾಡಿಯ ಕಾರ್ತಿಕ್ ಎಸ್ಟೇಟ್ ಹೋಟೇಲ್ ನಲ್ಲಿ ಸಭೆ ಇರುವುದಾಗಿ ಮೆಸೇಜ್ ಹಾಕಿದ್ದಾರೆ ಎಂದಿದ್ದಾರೆ.
ಶಶಿಕುಮಾರ್ ಅವರು ಸಂಜೆ 4:00 ಗಂಟೆಗೆ ಅಂಬಲಪಾಡಿಯ ಕಾರ್ತಿಕ್ ಎಸ್ಟೇಟ್ ಹೋಟೇಲ್ ನ 1 ನೇ ಮಹಡಿಯ ಮಿನಿ ಹಾಲ್ ಗೆ ಮಿಟೀಂಗ್ ಗೆ ಹೋಗಿದ್ದು ಮೀಟಿಂಗ್ ನಲ್ಲಿ ಘಟಕದ ಎಲ್ಲಾ ಸದಸ್ಯರು ಹಾಜರಿದ್ದರು ಎಂದಿದ್ದಾರೆ.ಮೀಟಿಂಗ್ ನಲ್ಲಿ ಅನ್ಸರ್ ಅಹಮ್ಮದ್ ರವರು ಪ್ರಭಾಕರ ರವರಲ್ಲಿ ಪ್ರಸ್ತುತ ಅಧ್ಯಕ್ಷರು ಇಲ್ಲದೇ ಮೀಟಿಂಗ್ ಹಾಜರಾಗುವಂತೆ ಹೇಗೆ ಮೆಸೇಜ್ ಕಳುಹಿಸಿದ್ದೀರಿ ಎಂದು ಕೇಳಿದಾಗ ಅವರೊಳಗೆ ವಾದ-ವಿವಾದವಾಗಿ ಹೊಡೆದಾಡಿಕೊಂಡಿರುತ್ತಾರೆ ಎಂದು ದೂರಿದ್ದಾರೆ. ಶಶಿಕುಮಾರ್ ಅವರು ಜಗಳವನ್ನು ತಪ್ಪಿಸಲು ಹೋದಾಗ ಪ್ರಭಾಕರ , ಜಯ , ಕುಶಲ , ಆಶ್ವಿನಿ ರವರು ಸೇರಿ ಶಶಿಕುಮಾರ್ ಅವರಿಗೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಶಶಿಕುಮಾರ್ ಅವರಿಗೆ ನಂತರ ಎದೆ ನೋವು ಕಾಣಿಸಿಕೊಂಡಿರುವುದರಿಂದ ಚಿಕಿತ್ಸೆಯ ಬಗ್ಗೆ ಅಜ್ಜರಕಾಡು ಸರಕಾರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 323, 504 , 506 ಜೊತೆಗೆ 34 ಐಪಿಸಿ & 3(1)(r), 3(1)(s), 3(2)(v-a) SC/ST ACT ರಂತೆ ಪ್ರಕರಣ ದಾಖಲಾಗಿದೆ.