ಉಡುಪಿ: ದಿನಾಂಕ:06-02-2024 (ಹಾಯ್ ಉಡುಪಿ ನ್ಯೂಸ್)
ಕರವೇ ಯಿಂದ ಉಡುಪಿ ಜಿಲ್ಲೆಯಾದ್ಯಂತ ಕನ್ನಡ ಕಡ್ಡಾಯ ಎಚ್ಚರಿಕೆಯ ಸಂದೇಶ ಜಾಥಾ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ಶೇಕಡಾ 60% ಕನ್ನಡವನ್ನು ಕಡ್ಡಾಯವಾಗಿ ಉಪಯೋಗಿಸಬೇಕೆಂದು ಸರಕಾರ ಆದೇಶಿಸಿದೆ.
ಆದರೂ ಉಡುಪಿ ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಇನ್ನು ಬದಲಾಗಿಲ್ಲ, ಈ ವಿಚಾರವಾಗಿ ಉಡುಪಿ ನಗರಸಭೆಯ ಅಧಿಕಾರಿಗಳು ಯಾವುದೇ ರೀತಿಯ ಎಚ್ಚರಿಕೆಯ ಕ್ರಮ ಕೈಗೊಳ್ಳದೇ ಇರುವುದು ವಿಷಾದದ ಸಂಗತಿ
ಆದ್ದರಿಂದ ಕನ್ನಡದ ಉಳಿವಿಗಾಗಿ ಸದಾ ಮುಂದಿರುವ ಕರ್ನಾಟಕ ರಕ್ಷಣಾ ವೇದಿಕೆಯು ಉಡುಪಿ ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳ ನಾಮಫಲಕಗಳ ವಿಷಯವಾಗಿ ( ಪ್ರವೀಣ್ ಕುಮಾರ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದಿಂದ ಎಚ್ಚರಿಕೆಯ ಸಂದೇಶ ನೀಡಲು ಒಂದು ವಾಹನಕ್ಕೆ ಧ್ವನಿವರ್ಧಕ ಅಳವಡಿಸಿಕೊಂಡು ಜಾಗರೂಕತೆ ಮೂಡಿಸುವ ಕಾರ್ಯವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು, ಇದಕ್ಕೆ ಅಧಿಕಾರಿಗಳಾದ ತಾವು ನಮ್ಮೊಂದಿಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ಆಗ್ರಹಿಸಿ ಪೌರಾಯುಕ್ತರು ನಗರಸಭೆ ಇವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಅ ರಾ ಪ್ರಭಾಕರ ರಾಜ್ ಪೂಜಾರಿ, ಜಯ ಪೂಜಾರಿ, ಕುಶಾಲ್ ಅಮೀನ್ ಬೆಂಗ್ರೆ, ಬ್ರಹ್ಮಾವರ ಮಹಿಳಾ ತಾಲ್ಲೂಕು ಉಸ್ತುವಾರಿ ಅಕ್ಷಯ ಶೆಟ್ಟಿ ,ಜಿಲ್ಲಾ ಸದಸ್ಯರಾದ ಸೋಮಪ್ಪ ತಿಂಗಳಾಯ, ರತ್ನಾಕರ ಮೊಗವೀರ, ರೋಷನ್ ಬಂಗೇರ, ಸುಧಾಕರ್ ಕಲ್ಮಾಡಿ,ಆನಂದ್ ಶೆಟ್ಟಿ, ಅಶ್ವಿನಿ ಕಿರಣ್, ಸರಿತಾ ಶೆಟ್ಟಿಗಾರ್, ವೀರೇಶ್ ಪಿ.ಕೆ, ಶಿವರಾಜ್, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ದೇವಿ ಪ್ರಸಾದ್ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.