Spread the love

ಉಡುಪಿ: ದಿನಾಂಕ:04-02-2024(ಹಾಯ್ ಉಡುಪಿ ನ್ಯೂಸ್)

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕ, ಭಾರತೀಯ ಜನತಾ ಪಾರ್ಟಿ ಉಡುಪಿಯ ಭೀಷ್ಮಾಚಾರ್ಯ ಶ್ರೀ ಸೋಮಶೇಖರ ಭಟ್ ಇಂದು ಅಸೌಖ್ಯದಿಂದ ದೈವಾಧೀನರಾಗಿದ್ದಾರೆ.

ಉಡುಪಿಯ ಪುರಸಭೆಯಿಂದ ದೆಹಲಿಯಲ್ಲಿ ಬಿಜೆಪಿ ಪಕ್ಷ ಕೇಂದ್ರ ಸರ್ಕಾರ ರಚಿಸುವವರೆಗೆ ಉಡುಪಿಯ ಈ ಆರ್ ಎಸ್ ಎಸ್ ನಾಯಕ ಶ್ರೀ ಸೋಮಶೇಖರ ಭಟ್ ಅವರು ಪರಿಶ್ರಮಿಸಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಗೌರವದ ಸ್ಥಾನದಲ್ಲಿರುವ ಹಲವಾರು ಗಣ್ಯರು ಶ್ರೀ ಸೋಮಶೇಖರ ಭಟ್ ಅವರ ರಾಜಕೀಯ ಶಿಷ್ಯರೇ ಆಗಿದ್ದಾರೆ. ಸೋಮಶೇಖರ ಭಟ್ ಅವರ ಮಾರ್ಗದರ್ಶನದಲ್ಲಿ ಸಾವಿರಾರು ಕಾರ್ಯಕರ್ತರು, ನಾಯಕರು ಬಿಜೆಪಿ ಪಕ್ಷ ದಲ್ಲಿ ಬೆಳೆದು ಬಂದಿದ್ದಾರೆ.

ತನ್ನ ಕೊನೆಯ ಉಸಿರಿನವರೆಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಸ್ತಿನ ಸಿಪಾಯಿ ಹಾಗೂ ಬಿಜೆಪಿ ಪಕ್ಷ ದ ನಿಷ್ಟಾವಂತ ಕಾರ್ಯಕರ್ತರಾಗಿ ದುಡಿದ ದೇಶ ಭಕ್ತ ಶ್ರೀ ಸೋಮಶೇಖರ ಭಟ್ ರವರ ನಿಧನದಿಂದ ಭಾರತೀಯ ಜನತಾ ಪಕ್ಷಕ್ಕೆ, ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.

error: No Copying!