ಉಡುಪಿ: ದಿನಾಂಕ: 04-02-2024 (ಹಾಯ್ ಉಡುಪಿ ನ್ಯೂಸ್)
ನಗರದ ಕೊಡಂಕೂರು ನಿವಾಸಿ ಖ್ಯಾತ ನಾಟಿ ವೈದ್ಯ ಶ್ರೀನಿವಾಸ ಪೂಜಾರಿ(68) ಅವರು ಇಂದು ಬೆಳಿಗ್ಗೆ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಉಡುಪಿಯಲ್ಲಿ ಮರದ ವ್ಯಾಪಾರ ನಡೆಸುತ್ತಿದ್ದ ಕೊಡಂಕೂರು ಶ್ರೀನಿವಾಸ ಪೂಜಾರಿ ಅವರು ಮರದ ವ್ಯಾಪಾರದ ಜೊತೆಗೆ ನಾಟಿ ವೈದ್ಯರಾಗಿಯೂ ಪರಿಚಿತರಾಗಿದ್ದರು. ಮಧುಮೇಹ, ಕಿಡ್ನಿ ವೈಫಲ್ಯ, ಕ್ಯಾನ್ಸರ್,ವಾತ ಹೀಗೆ ಎಲ್ಲಾ ಖಾಯಿಲೆಗೂ ಶ್ರೀನಿವಾಸ ಪೂಜಾರಿ ಅವರು ನಾಟಿ ಮದ್ದು ನೀಡುತ್ತಿದ್ದರು.
ಶ್ರೀನಿವಾಸ ಪೂಜಾರಿ ಅವರ ಕೈಗುಣದಿಂದ ರೋಗಿಗಳು ಗುಣಮುಖ ರಾಗುತ್ತಿದ್ದು ರಾಜ್ಯದ ಮೂಲೆ ಮೂಲೆಗಳಿಂದ ರೋಗಿಗಳು ಇವರನ್ನು ಹುಡುಕಿಕೊಂಡು ಬರುತ್ತಿದ್ದರು. ಕೊಡುಗೈ ದಾನಿಯಾಗಿದ್ದ ಶ್ರೀನಿವಾಸ ಪೂಜಾರಿ ಅವರ ನಿಧನದಿಂದ ನಾಟಿ ವೈದ್ಯ ಪರಂಪರೆಗೆ ತುಂಬಲಾರದ ನಷ್ಟವಾಗಿದೆ.