ಬ್ರಹ್ಮಾವರ: ದಿನಾಂಕ:30-01-2024 (ಹಾಯ್ ಉಡುಪಿ ನ್ಯೂಸ್) ಪೇತ್ರಿ ಚರ್ಚ್ ನ ಆಡಳಿತ ಮಂಡಳಿ ಸದಸ್ಯರು ಓರ್ವ ರಿಗೆ ಮಂಡಳಿಯ ಕಾರ್ಯದರ್ಶಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಮಂಜು ಡಿ ಅಲ್ಮೇಡಾ (38) ಎಂಬವರು ಬ್ರಹ್ಮಾವರ ತಾಲೂಕು ಪೇತ್ರಿಯ ಸೈಂಟ್ ಪೀಟರ್ ಚರ್ಚ್ ನ ಆರ್ಥಿಕ ಮಂಡಳಿಯ ಸದಸ್ಯರಾಗಿದ್ದು, ಅದೇ ರೀತಿ ಆರೋಪಿ ವಿನ್ಸೆಂಟ್ ಪ್ರಕಾಶ್ ಅಲ್ಮೇಡಾ ಎಂಬವರು ಚರ್ಚ್ ನ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿದ್ದು ಅವರು ಚರ್ಚ್‌ಗೆ ಸಂಬಂಧ ಪಟ್ಟ ಹಲವಾರು ಕಟ್ಟಡ ಕಾಮಗಾರಿಗಳನ್ನು ಮಾಡಿದ್ದು, ಅವರು ಮಾಡಿದ್ದ ಕಾಮಗಾರಿಗಳಲ್ಲಿ ಅವ್ಯವಹಾರ ಆಗಿರುವುದರಿಂದ ಈ ಹಿಂದೆ ನಡೆದ ಚರ್ಚ್ ಕಮಿಟಿಯ ಸಬೆಯಲ್ಲಿ ಮುಂದಕ್ಕೆ ಚರ್ಚ್‌ನ ಯಾವುದೇ ಕಾಮಗಾರಿ ನೀಡುವಾಗ ಟೆಂಡರ್ ಮುಖಾಂತರ ನೀಡುವುದು ಸೂಕ್ತ ವೆಂಬುದಾಗಿ ಮಂಜು ಡಿ ಅಲ್ಮೇಡ ಅವರು ಸಭೆಯಲ್ಲಿ ಅವರ ಅಭಿಪ್ರಾಯ ನೀಡಿರುತ್ತಾರೆ ಎನ್ನಲಾಗಿದೆ.
ಇದೇ ವಿಚಾರದಲ್ಲಿ ವಿನ್ಸೆಂಟ್ ಪ್ರಕಾಶ್ ಅಲ್ಮೇಡ ಮತ್ತು ಇನ್ನೋರ್ವ ಆರೋಪಿ ಸುನಿಲ್ ಯಾನೆ ಜಗದೀಶ ಅವರು ಮಂಜು ಡಿ ಅಲ್ಮೇಡ ವಿರುದ್ಧ ಮನಸ್ತಾಪಗೊಂಡು ದಿನಾಂಕ 19/01/2024 ರಂದು ರಾತ್ರಿ 10:00 ಗಂಟೆಗೆ ಮಂಜು ಡಿ ಅಲ್ಮೇಡ ಗೆ ಕರೆ ಮಾಡಿ ಬೆದರಿಕೆ ಹಾಕಿದ್ದು ಅಲ್ಲದೇ ದಿನಾಂಕ 24/01/2024 ರಂದು ಸಂಜೆ ಮಂಜು ಡಿ ಅಲ್ಮೇಡ ಅವರು ಚೇರ್ಕಾಡಿ ಗ್ರಾಮದ ಇಂಬ್ರುಗುಲಿ ಎಂಬಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವಿನ್ಸೆಂಟ್ ಪ್ರಕಾಶ್ ಅಲ್ಮೇಡ ಮತ್ತು ಸುನಿಲ್ ಇಬ್ಬರೂ ಒಂದು ಕಾರಿನಲ್ಲಿ ಬಂದು ಮಂಜು ಡಿ ಅಲ್ಮೇಡ ಅವರನ್ನು ತಡೆದು ನಿಲ್ಲಿಸಿ ಕೈಯಿಂದ ಹೊಡೆಯಲು ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಮಂಜು ಡಿ ಅಲ್ಮೇಡ ರನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಮಂಜು ಡಿ ಅಲ್ಮೇಡ ಪೊಲೀಸರಿಗೆ ದೂರು ನೀಡಿದ್ದಾರೆ.
. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ : ಕಲಂ 341, 32ಐ3, 504, 506(2) ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.