Spread the love

ಬೈಂದೂರು: ದಿನಾಂಕ 29/01/2024 (ಹಾಯ್ ಉಡುಪಿ ನ್ಯೂಸ್) ಕಾಸನಾಡಿ ಹಾಡಿಯಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದಲ್ಲಿಗೆ ಬೈಂದೂರು ಪೊಲೀಸ್‌ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಸೂರ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.

ಬೈಂದೂರು ಪೊಲೀಸ್ ಠಾಣೆ  ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಸೂರ ಅವರು ದಿನಾಂಕ : 27-01-2024 ರಂದು ಠಾಣೆಯಲ್ಲಿ ಇರುವಾಗ  ಕಾಸನಾಡಿ  ಎಂಬಲ್ಲಿ  ಹಾಡಿಯಲ್ಲಿ ಸಾರ್ವಜನಿಕ  ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ನಡೆಯುತ್ತಿದೆ ಎಂದು ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಕೂಡಲೇ ದಾಳಿ ಮಾಡಿ ಅಲ್ಲಿ ಕೋಳಿ ಅಂಕ  ಜುಗಾರಿ ಆಟದಲ್ಲಿ ನಿರತರಾಗಿದ್ದ 1) ನಾರಾಯಣ, 2) ಕರ್ಣ, 3) ಮಧುಕರ, 4) ಸುಬ್ಬ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದಿದ್ದು, ಆರೋಪಿ ಸಚಿನ್ , ಮಹಾಬಲ  , ಚಂದ್ರ  ,  ಶೇಖರ   ಹಾಗೂ ಇತರರು  ಓಡಿಹೋಗಿದ್ದಾರೆ ಎಂದು ಬಂಧಿತರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಕೋಳಿ ಅಂಕಕ್ಕೆ ಬಳಸಿದ  4  ಕೋಳಿಗಳನ್ನು , ಕೋಳಿಬಾಳು-2, ಕೋಳಿಯ ಕಾಲಿಗೆ ಬಾಳುಕಟ್ಟಲು ಉಪಯೋಗಿಸಿದ ಹಗ್ಗ-2  ಹಾಗೂ ನಗದು 1540/- ರೂಪಾಯಿಯನ್ನು ಸ್ವಾದೀನಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಕೋಳಿಗಳಿಗೆ ಆಹಾರ, ನೀರು ಕೊಡದೇ ಕಾಲಿಗೆ ಕತ್ತಿಕಟ್ಟಿ  ಹಿಂಸೆ ನೀಡಿ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ನಡೆಸುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಕಲಂ: 11(1)A ಪ್ರಾಣಿ ಹಿಂಸೆ ನಿಷೇದ ಕಾಯಿದೆ ಮತ್ತು 87,93 ಕರ್ನಾಟಕ ಪೊಲೀಸ್ ಕಾಯಿದೆ ಯಂತೆ ಪ್ರಕರಣ ದಾಖಲಾಗಿದೆ.

error: No Copying!