Spread the love
  • ಬ್ರಹ್ಮಾವರ: ದಿನಾಂಕ:25-01-2024(ಹಾಯ್ ಉಡುಪಿ ನ್ಯೂಸ್) ಯಡ್ತಾಡಿ ಗ್ರಾಮದ ನಿವಾಸಿ ಯೋರ್ವರಿಗೆ ಅರ್ತಾರ್ ಎಂಬಾತ ವಿನಾಕಾರಣ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • ಯಡ್ತಾಡಿ ಗ್ರಾಮದ ನಿವಾಸಿ ಬಾಬು (67) ಎಂಬವರ ಪ್ರಿಯಾ ಕಂಗನ್‌ ಸ್ಟೋರ್‌ ನಿಂದ ಸಮೀಪದಲ್ಲಿರುವ ಅವರ ಮಗಳ ಪಾರ್ಲರ್‌ಗೆ ಹೋಗುತ್ತಿರುವಾಗ ದಿನಾಂಕ 25.01.2024  ರಂದು ಬೆಳಿಗ್ಗೆ ಮಗಳ ಪಾರ್ಲರ್ ಎದುರು ಆರೋಪಿ ಅರ್ತಾರ್‌ ಎಂಬವ ಅಲ್ಲಿಗೆ ಬಂದು ವಿನಾಕಾರಣ ಬಾಬುರವರನ್ನು ದೂಡಿ ಹಾಕಿ ,ನಮ್ಮ ಊರಿಗೆ ನೀನು ಎಲ್ಲಿಂದ ಬಂದೆ, ನಮ್ಮ ಬಳಿಗೆ ಬಂದು ನೀನು ದೊಡ್ಡ ಜನ ಆಗುವುದಾ ಎಂದು ಅವಾಚ್ಯ ಶಬ್ಧದಿಂದ ಬೈದು ಕೈಯಿಂದ ಕೆನ್ನೆಗೆ ಹೊಡೆದು ಕೋಲಿನಿಂದ ಬಾಬುರವರ ಎಡಕೈಯ ಮುಂಗೈಗೆ ಹಾಗೂ ಎಡಕಾಲಿನ ಮಣಿಗಂಟಿಗೆ ಹೊಡೆದು ಗಾಯವುಂಟು ಮಾಡಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • ಗಾಯಗೊಂಡ ಬಾಬುರವರು ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಹೋಗಿ  ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಕಲಂ 323, 324 504 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

error: No Copying!