- ಮಲ್ಪೆ: ದಿನಾಂಕ 14/01/2024 (ಹಾಯ್ ಉಡುಪಿ ನ್ಯೂಸ್) ಅಡ್ಡ ಬೆಂಗ್ರೆ ಪರಿಸರದಲ್ಲಿ ಮಾರಕಾಸ್ತ್ರ ಹಿಡಿದು ಕೊಂಡು ಗಲಾಟೆ ಮಾಡುತ್ತಿದ್ದ ಮೂವರನ್ನು ಮಲ್ಪೆ ಪೊಲೀಸ್ ಠಾಣೆಯ ಎಎಸ್ಐ ಯವರಾದ ಸಂತೋಷ ಕುಮಾರ್ ರವರು ಬಂಧಿಸಿದ್ದಾರೆ.
- ಮಲ್ಪೆ ಪೊಲೀಸ್ ಠಾಣೆಯ ಎಎಸ್ಐ ಯವರಾದ ಸಂತೋಷ ಕುಮಾರ ರವರು ದಿನಾಂಕ: 12-01-2024 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಪಿಎಸ್‌ಐರವರು ಕರೆ ಮಾಡಿ ಅಡ್ಡಬೇಂಗ್ರೆಯಲ್ಲಿ 3 ಜನ ವ್ಯಕ್ತಿಗಳು ಮಾರಕಾಯುಧವಾದ ಮಚ್ಚನ್ನು ಹಿಡಿದುಕೊಂಡು ಗಲಾಟೆ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
- ಮಾಹಿತಿ ಬಂದ ಕೂಡಲೇ ಸಿಬ್ಬಂಧಿಗಳೊಂದಿಗೆ ಬೆಂಗ್ರೆ ಓಯಾಸಿಸ್ ಗೆಸ್ಟ್ ಹೌಸ್ ಬಳಿ ಹೋಗಿ ನೋಡಿದಾಗ ಅಲ್ಲಿ 3 ಜನ ವ್ಯಕ್ತಿಗಳು ಹಾಗೂ ಸಾರ್ವಜನಿಕರು ಸೇರಿದ್ದು, ಪೊಲೀಸರು ಸಾರ್ವಜನಿಕರನ್ನು ದೂರ ಸರಿಸಿ ಆ 3 ವ್ಯಕ್ತಿಗಳನ್ನು ಬಂಧಿಸಿ ವಶಕ್ಕೆ ಪಡೆದು ಹೆಸರು ವಿಚಾರಿಸಿದಾಗ ಮೊಹಮ್ಮದ್ ಸಕ್ಲೇನ್ , ಅಬ್ದುಲ್ ರಾಕೀಬ್, ಸವಿನ್ ಯಾನೆ ಸುಮಿತ್ ತೇಜಪಾಲ್ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
- 3 ಜನ ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆದು ಆರೋಪಿಗಳು ಬಂದಿದ್ದ ವಾಹನವನ್ನು ಪರಿಶೀಲಿಸಿದಾಗ ನೋಂದಣಿ ಸಂಖ್ಯೆಯೇ ಇಲ್ಲದ ಕಪ್ಪು ಬಜಾಜ್ ಪಲ್ಸರ್ ಎನ್ ಎಸ್ ಆಗಿದ್ದು, ಆ ಬಜಾಜ್ ಪಲ್ಸರ್ ಬೈಕ್ ನ ಅಂದಾಜು ಮೌಲ್ಯ 80000 ರೂ ಆಗಬಹುದು ಎನ್ನಲಾಗಿದೆ.
- ಇನ್ನೊಂದು ವಾಹನವನ್ನು ಪರಿಶೀಲಿಸಿದಾಗ KA20EW1256 ನೋಂದಣಿ ಸಂಖ್ಯೆಯದ್ದಾಗಿದ್ದು, ಆ ಸ್ಕೂಟರ್ ನಲ್ಲಿ ಒಂದು ತಲವಾರು ಇದ್ದು, ತಲವಾರು ಮತ್ತು ಸ್ಕೂಟರನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುತ್ತಾರೆ.
- ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:4, 25(1)(ಎ) ಶಸ್ತ್ರಾಸ್ತ್ರ ನಿಷೇದ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.