- ಬೈಂದೂರು: ದಿನಾಂಕ 09/01/2024(ಹಾಯ್ ಉಡುಪಿ ನ್ಯೂಸ್) ಮೆಟ್ಟಿನ ಹೊಳೆ ಸರಕಾರಿ ಹಾಡಿಯಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ 3 ಜನರನ್ನು ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು (ಕಾ& ಸು ) ತಿಮ್ಮೇಶ್ ಬಿ ಎನ್ ಅವರು ಬಂಧಿಸಿದ್ದಾರೆ.
- ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿ ಎನ್ ಅವರು ದಿನಾಂಕ:07-01-2024 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಾಲ್ತೋಡು ಗ್ರಾಮದ ಮೆಟ್ಟಿನಹೊಳೆ ಎಂಬಲ್ಲಿ ಸರಕಾರಿ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದೆ ಎನ್ನಲಾಗಿದೆ.
- ಮಾಹಿತಿ ಮೇರೆಗೆ ಕೂಡಲೇ ಸ್ಥಳಕ್ಕೆ ದಾಳಿ ಮಾಡಿ ಇಸ್ಪೀಟ್ ಜುಗಾರಿ ಆಟವನ್ನು ಆಡುತ್ತಿದ್ದ 1] ವಿಶ್ವನಾಥ, 2] ಲಕ್ಷ್ಮಣ, 3] ದಿನಕರ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದಿದ್ದು ಉಳಿದವರು ಓಡಿ ಹೋಗಿರುತ್ತಾರೆ ಎನ್ನಲಾಗಿದೆ .
- ಬಂಧಿತರಲ್ಲಿ ಓಡಿಹೋದವರ ಬಗ್ಗೆ ವಿಚಾರಿಸಿದಾಗ 1] ಭಾಸ್ಕರ, 2] ಮಂಜು, 3] ರವಿ, 4] ಗಣೇಶ ,5] ಸೀತಾರಾಮ ಎಂಬುದಾಗಿ ತಿಳಿಸಿದ್ದು ಆರೋಪಿಗಳಿಂದ ಆಟಕ್ಕೆ ಬಳಸಿದ ಹಳೆಯ ದಿನಪತ್ರಿಕೆ, ಇಸ್ಪೀಟ್ ಕಾರ್ಡ್ ಹಾಗೂ 1600 /- ರೂಪಾಯಿ ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
- ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿದೆ.