Spread the love

  • ಬ್ರಹ್ಮಾವರ: ದಿನಾಂಕ 03/01/2024 (ಹಾಯ್ ಉಡುಪಿ ನ್ಯೂಸ್) ಮಂದಾರ್ತಿ ಜೆಪಿ ಸರ್ಕಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಇಬ್ಬರನ್ನು ಬ್ರಹ್ಮಾವರ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ ಮಧು ಬಿ.ಈ ಅವರು ಬಂಧಿಸಿದ್ದಾರೆ.
  • ಬ್ರಹ್ಮಾವರ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮಧು ಬಿ.ಈ ಅವರಿಗೆ ದಿನಾಂಕ:02-01-2024 ರಂದು ಮಂದಾರ್ತಿ ಎಂಬಲ್ಲಿಯ ಜೆಪಿ ಸರ್ಕಲ್‌‌ ಬಳಿಯ  ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳಾದ ಜಗದೀಶ  ಹಾಗೂ ಚಂದ್ರ  ಎಂಬವರು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಪಡೆದು ಮಟ್ಕಾ ಜುಗಾರಿ ನಡೆಸುತ್ತಿರುವುದಾಗಿ ಬಂದ ಸಾರ್ವಜನಿಕ ಮಾಹಿತಿ ಮೇರೆಗೆ ಕೂಡಲೇ ದಾಳಿ ನಡೆಸಿ ಅವರನ್ನು ಬಂಧಿಸಿ ಆವರವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣ ರೂಪಾಯಿ 4,135/- , ಮಟ್ಕಾ ಬರೆದ ಚೀಟಿ, ಬಾಲ್ ಪೆನ್‌  ವಶಪಡಿಸಿಕೊಂಡಿರುತ್ತಾರೆ.
  • ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಕಲಂ:  78 (I) (III) KP ACT  ರಂತೆ ಪ್ರಕರಣ  ದಾಖಲಾಗಿದೆ.

error: No Copying!