
ಕಾಪು: ದಿನಾಂಕ :02-01-2024 (ಹಾಯ್ ಉಡುಪಿ ನ್ಯೂಸ್) ಇನ್ನಂಜೆ ಕ್ರಾಸ್ ಬಳಿ ಗಾಂಜಾ ಸೇವನೆ ಮಾಡಿದ್ದ ಯುವಕನನ್ನು ಕಾಪು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ (ಕಾ.ಸು), ಅಬ್ದುಲ್ ಖಾದರ್ ರವರು ಬಂಧಿಸಿದ್ದಾರೆ.
ಕಾಪು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ಕಾ.ಸು) ಅಬ್ದುಲ್ ಖಾದರ್ ಅವರಿಗೆ ದಿನಾಂಕ :31-12-2023 ರಂದು ಇನ್ನಂಜೆ ಕ್ರಾಸ್ ಬಳಿ ಓರ್ವ ವ್ಯಕ್ತಿ ಮಾದಕ ವಸ್ತು ಸೇವನೆಯ ನಶೆಯಲ್ಲಿರುವ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ತೆರಳಿ ಆತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆತನ ಹೆಸರು ಮೊಹಮ್ಮದ್ ತೌಫಿಕ್ (26) ಎಂದು ತಿಳಿಸಿದ್ದಾನೆ ಎನ್ನಲಾಗಿದೆ.
ಬಳಿಕ ಆತನನ್ನು ವೈದ್ಯಕೀಯ ಪರೀಕ್ಷೆಗಾಗಿ ಪ್ರೊಫೆಸರ್ ಅಂಡ್ ಹೆಡ್ ಪೊರೆನ್ಸಿಕ್ ವಿಭಾಗ, ಕೆಎಂಸಿ ಮಣಿಪಾಲ ರವರ ಮುಂದೆ ಹಾಜರುಪಡಿಸಿದ್ದು, ಪರೀಕ್ಷಿಸಿದ ವೈಧ್ಯರು ಗಾಂಜಾ ಸೇವಿಸಿರುವ ಬಗ್ಗೆ ದಿನಾಂಕ 01/01/2024 ರಂದು ದೃಢಪತ್ರ ನೀಡಿರುತ್ತಾರೆ ಎನ್ನಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 27 (B) NDPS Act ನಂತೆ ಪ್ರಕರಣ ದಾಖಲಾಗಿದೆ.