ಗಂಗೊಳ್ಳಿ: ದಿನಾಂಕ 01-01-2024(ಹಾಯ್ ಉಡುಪಿ ನ್ಯೂಸ್) ಆಲೂರು ಬಂಗ್ಲೆ ಪರಿಸರದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಏಳು ಜನರನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಹರೀಶ್ ಆರ್, ರವರು ಬಂಧಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ಕಾ&ಸು) ಹರೀಶ್ ಆರ್ ರವರು ದಿನಾಂಕ:31-12-2023 ರಂದು ಆಲೂರು ಬಂಗ್ಲೆ ಎಂಬಲ್ಲಿರುವ ಸರ್ಕಾರಿ ಹಾಡಿಯಲ್ಲಿ ಕುಳಿತು ಇಸ್ವೀಟ್ ಜುಗಾರಿ ಆಡುತ್ತಿದ್ದವರನ್ನು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಅಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆಪಾದಿತರಾದ 1.ಮೋಹನ, 2.ಅಣ್ಣಪ್ಪ, 3.ಸಂಜೀವ , 4)ಮಲ್ಲಪ್ಪ , 5)ಶರಣಪ್ಪ, 6)ರತ್ನಾಕರ, 7)ಶಮನಪ್ಪ ಎಂಬವರನ್ನು ಸಿಬ್ಬಂದಿಯವರ ಸಹಾಯದಿಂದ ಬಂಧಿಸಿ ವಶಕ್ಕೆ ಪಡೆದಿದ್ದು ಉಳಿದ 4 ಜನ ಓಡಿ ಹೋಗಿದ್ದು ಅವರ ಹೆಸರು 8)ಮಾಂತೇಶ, 9)ರವಿ, 10)ಗುಂಡ, 11)ಮಂಜು ಕಪ್ಪಟ್ಟಿ ಎಂದಾಗಿರುತ್ತದೆ ಎನ್ನಲಾಗಿದೆ.
ಅವರು ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ನಗದು 3,100/- ರೂಪಾಯಿ, ಇಸ್ಪೀಟ್ ಎಲೆಗಳು, ಪಾಲಿಥೀನ್ ಚೀಲ, ಹಾಗೂ ಮೇಣದ ಬತ್ತಿ ಯನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ