- ಉಡುಪಿ: ದಿನಾಂಕ:30-12-2023(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ನಿರಂತರ ಮಾನಸಿಕ,ದೈಹಿಕ ಹಲ್ಲೆ ನಡೆಸುತ್ತಿದ್ದಾರೆ ಎಂದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
- ಉದ್ಯಾವರ ನಿವಾಸಿ ನಿಶಾ ಎಂಬವರಿಗೆ ದಿನಾಂಕ: 29-04-2012 ರಂದು ನಾಗೇಶ್ ಕುಮಾರ್ ಎಂಬವರೊಂದಿಗೆ ಉದ್ಯಾವರ ಹಲೀಮಾ ಸಬ್ಜು ಸಭಾಭವನದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಮದುವೆಯ ನಂತರ ಗಂಡನ ಮನೆಯಾದ ಉದ್ಯಾವರ ಕಡವಿನ ಬಾಗಿಲುವಿನಲ್ಲಿ ಸಾಂಸಾರಿಕ ಜೀವನ ಮಾಡಿಕೊಂಡಿದ್ದರು ಎಂದಿದ್ದಾರೆ. ಮದುವೆಯಾದ ಮೂರು ತಿಂಗಳ ನಂತರ ಸಣ್ಣ ಪುಟ್ಟ ವಿಚಾರಗಳಿಗೆ ನಿಶಾರವರ ಗಂಡ ನಿಶಾರವರಿಗೆ ಅವಾಚ್ಯವಾಗಿ ಬೈಯ್ಯುವುದು, ಹೊಡೆಯುವುದು ಮಾಡುತ್ತಿದ್ದನು ಎಂದಿದ್ದಾರೆ.
- ದಿನಾಂಕ: 04/10/2017 ರಂದು ಗಂಡನಾದ ನಾಗೇಶ ಕುಮಾರ್ ಹಾಗೂ ಆಪಾದಿತೆ ಲಲಿತ ಎಂಬವರು ನಿಶಾರವರಿಗೆ ಹೊಡೆದಿರುತ್ತಾರೆ ಎಂದು ದೂರಿದ್ದಾರೆ. ಆಪಾದಿತೆ ಲಲಿತರವರು ಕೂಡಾ ನಿಶಾರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಗಂಡ ನಾಗೇಶ್ ಕುಮಾರ್ ನ ಪರ ವಹಿಸಿ ಮಾತನಾಡಿ ನಿಶಾರವರಿಗೆ ಕಿರುಕುಳ ನೀಡುವಂತೆ ಪ್ರಚೋದನೆ ನೀಡುತ್ತಿದ್ದರು ಎಂದಿದ್ದಾರೆ.
- ದಿನಾಂಕ: 28/12/2023 ರಂದು ಮಧ್ಯಾಹ್ನ ಗಂಡನಾದ ನಾಗೇಶ್ ಕುಮಾರ್ ನು ನಿಶಾರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾನೆ ಎಂದು ದೂರಿದ್ದಾರೆ. ನಿಶಾರವರು ತನಗಾದ ನೋವಿನ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರಿದ್ದಾರೆ.
- . ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 498(ಎ), 323,324, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.