ಮಲ್ಪೆ: ದಿನಾಂಕ :30-12-2023(ಹಾಯ್ ಉಡುಪಿ ನ್ಯೂಸ್) ಹೊಸ ದಕ್ಕೆಯ ಬಳಿಯ ಸಾರ್ವಜನಿಕ ಜಾಗದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಗುರುನಾಥ ಬಿ.ಹೆಚ್ ಅವರು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಗುರುನಾಥ ಬಿ. ಹೆಚ್ ಅವರಿಗೆ ದಿನಾಂಕ:29/12/2023 ರಂದು ಮಲ್ಪೆ ಬಂದರಿನ ಹೊಸ ದಕ್ಕೆಯ ಬಳಿಯ ಖಾಲಿ ಸಾರ್ವಜನಿಕ ಜಾಗದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವುದಾಗಿ ಸ್ಥಳೀಯರಿಂದ ಬಂದ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿದ್ದು ಜುಗಾರಿ ಆಟ ಆಡುತ್ತಿದ್ದವರು ಓಡಿ ಹೋಗಿದ್ದು ಕೆಲವರನ್ನು ಪೊಲೀಸರು ಹಿಡಿದು ಬಂಧಿಸಿ ಹೆಸರು ವಿಚಾರಿಸಿದಾಗ 1) ಸತ್ಯನಂದನ (40), 2) ಯಮುನಪ್ಪ (24) , 3) ರಂಜಿತ್(32) , 4) ರಾಮದಾಸ್ (55) ಎಂದು ತಿಳಿಸಿದ್ದು , ಆಟಕ್ಕೆ ಬಳಸಿದ ಇಸ್ಪೀಟು ಎಲೆಗಳು , ಪ್ಲಾಸ್ಟಿಕ್ ಚೀಲ ಹಾಗೂ ಜೂಜಾಟಕ್ಕೆ ಬಳಸಿದ 1500/- ರೂಪಾಯಿ ಹಾಗೂ ಆರೋಪಿಗಳ ವಶದಲ್ಲಿ ಇದ್ದ 2660/- ರೂಪಾಯಿ ಸ್ವಾಧೀನಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿದೆ.