Spread the love

ಬ್ರಹ್ಮಾವರ: ದಿನಾಂಕ: 17/12/2023 (ಹಾಯ್ ಉಡುಪಿ ನ್ಯೂಸ್) ಬ್ರಹ್ಮಾವರದ ನ್ಯಾಯಾಲಯಕ್ಕೆ ತೆರಳುತ್ತಿದ್ದ ವ್ಯಕ್ತಿ ಯೋರ್ವರಿಗೆ ನಾಲ್ವರು ವಾಹನಗಳಲ್ಲಿ ಬಂದು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ರಹ್ಮಾವರ ತಾಲೂಕು ಚೇರ್ಕಾಡಿ ಗ್ರಾಮದ ಅಣ್ಣಯ್ಯ (60) ಎಂಬವರು ದಿನಾಂಕ: 12-12-2023 ರಂದು ನೋಟರಿ ದಾಖಲಾತಿಯನ್ನು ಹಾಜರುಪಡಿಸಲು ಬ್ರಹ್ಮಾವರ ತಾಲೂಕು ವಾರಂಬಳ್ಳಿ ಗ್ರಾಮದ ಎ.ಸಿ.ಜೆ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯಕ್ಕೆ ಬರುತ್ತಿರುವಾಗ ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಆರೋಪಿತರುಗಳಾದ 1.ಅಕ್ಕಯ್ಯ 2.ಮಹೇಶ 3.ಮಹೇಂದ್ರ  4.ಮಮತಾ ಎಂಬವರು ಒಂದು  ಕಾರು ಮತ್ತು ಆಟೋರಿಕ್ಷಾದಲ್ಲಿ ಬಂದು ನ್ಯಾಯಾಲಯದ ಆವರಣದಲ್ಲಿ ಅಣ್ಣಯ್ಯ ರವರನ್ನು ಅಡ್ಡ ತಡೆದು ನಿಲ್ಲಿಸಿ, ಅಣ್ಣಯ್ಯರಿಗೆ ಹಲ್ಲೆ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರಿದ್ದಾರೆ.

. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಕಲಂ: 279, 337, 338 ಐಪಿಸಿ ಮತ್ತು ಕಲಂ: 134 (ಎ) ಮತ್ತು (ಬಿ) ಐಎಮ್‌ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

error: No Copying!