ಇಂದ್ರಾಳಿ: ದಿನಾಂಕ: 17-12-2023 (ಹಾಯ್ ಉಡುಪಿ ನ್ಯೂಸ್) ಇಂದ್ರಾಳಿಯಿಂದ ಇಂದ್ರಾಳಿ ದೇವಸ್ಥಾನಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಹುಲ್ಲು ಪೊದೆಗಳು ಬೆಳೆದಿದ್ದು ತಿರುವು ಗಳಲ್ಲಿ ಎದುರಿನಿಂದ ಬರುವ ವಾಹನಗಳು ಕಾಣಿಸದೆ ಅಪಘಾತ ಗಳಾಗುತ್ತಿವೆ ಎಂದು ಆಶ್ರಯದಾತ ಆಟೋ ಯೂನಿಯನ್ ನವರು ಆರೋಪಿಸಿದ್ದಾರೆ.
ಪೊದೆಗಳಿಂದಾಗಿ ಇಂದು ಬೆಳಿಗ್ಗೆ ಈ ರಸ್ತೆಯಲ್ಲಿ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತ ವಾಗಿದ್ದು ಇಬ್ಬರು ಗಾಯಗೊಂಡು ವಾಹನಗಳು ಜಖಂಗೊಂಡಿದೆ ಎಂದು ಆರೋಪಿಸಿದ್ದಾರೆ.