Spread the love

ಹಿರಿಯಡ್ಕ : ದಿನಾಂಕ 08/12/2023 (ಹಾಯ್ ಉಡುಪಿ ನ್ಯೂಸ್) ಹಿರಿಯಡ್ಕ ರಾ.ಹೆದ್ದಾರಿಯಲ್ಲಿ ಮರಳನ್ನು ಕಳ್ಳತನ ಮೂಲಕ ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನವನ್ನು ಹಿರಿಯಡ್ಕ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಮಂಜುನಾಥ್ ಮರಬದರವರು ಸ್ವಾಧೀನಪಡಿಸಿಕೊಂಡಿದ್ದಾರೆ.

ಹಿರಿಯಡ್ಕ ಪೊಲೀಸ್‌ ಠಾಣೆಯ ಪಿ.ಎಸ್.ಐ ಯವರಾದ ಮಂಜುನಾಥ್ ಮರಬದರವರು ದಿನಾಂಕ : 07-12-2023 ರಂದು ಠಾಣಾ ಸಿಬ್ಬಂದಿಗಳೊಂದಿಗೆ ಹಿರಿಯಡಕ ಪೊಲೀಸ್ ಠಾಣೆಯ ಮುಂಭಾಗದಲ್ಲಿ ರಾ.ಹೆ 169 (ಎ) ರಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಬೆಳಿಗ್ಗೆ ಸುಮಾರು 8:30 ಗಂಟೆ ಸಮಯಕ್ಕೆ ಹಿರಿಯಡಕ ಜಂಕ್ಷನ್‌ನಿಂದ ಮಣಿಪಾಲ ಕಡೆಗೆ ಬರುತ್ತಿದ್ದ ಹಳದಿ ಬಣ್ಣದ ಟಿಪ್ಪರ್‌ ವಾಹನದ ಚಾಲಕನು ಪಿ.ಎಸ್.ಐ ಮತ್ತು ಸಿಬ್ಬಂಧಿಗಳನ್ನು ನೋಡಿ ಟಿಪ್ಪರ್‌ ವಾಹನವನ್ನು ಸ್ವಲ್ಪ ದೂರದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಕೀಯನ್ನು ವಾಹನದಲ್ಲೇ ಬಿಟ್ಟು ವಾಹನದಿಂದ ಇಳಿದು ಸ್ಥಳದಿಂದ ಪರಾರಿಯಾಗಿರುತ್ತಾನೆ ಎನ್ನಲಾಗಿದೆ .ಟಿಪ್ಪರ್‌ ವಾಹನವನ್ನು ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ ಮರಳು ತುಂಬಿರುವುದು ಕಂಡು ಬಂದಿರುತ್ತದೆ ಎಂದು ಹೇಳಲಾಗಿದೆ.

ಟಿಪ್ಪರ್ ವಾಹನದಲ್ಲಿನ ಮರಳಿನ ಅಂದಾಜು ಮೌಲ್ಯ 12 ಸಾವಿರ ರೂಪಾಯಿ ಆಗಬಹುದು ಎನ್ನಲಾಗಿದೆ . ಟಿಪ್ಪರ್ ವಾಹನದಲ್ಲಿ ಆರೋಪಿಯು ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಯಾವುದೇ ರಾಜಧನ ಪಾವತಿಸದೇ ಎಲ್ಲಿಂದಲೋ ಕಳ್ಳತನ ಮಾಡಿ ಮರಳನ್ನು ತುಂಬಿಕೊಂಡು ಹೋಗುತ್ತಿದ್ದ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ.

ಒಟ್ಟು ಸುಮಾರು 12,000/- ರೂ ಮೌಲ್ಯದ ಮರಳು ಹಾಗೂ ಮರಳು ತುಂಬಿದ ಟಿಪ್ಪರ್‌ ವಾಹನವನ್ನು ಹಿರಿಯಡ್ಕ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ  ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಕಲಂ: 379 IPCಯಂತೆ ಪ್ರಕರಣ ದಾಖಲಾಗಿದೆ.

error: No Copying!