- ಬೈಂದೂರು: ದಿನಾಂಕ: 07/12/2023 (ಹಾಯ್ ಉಡುಪಿ ನ್ಯೂಸ್) ಉಪ್ಪುಂದ ಗ್ರಾಮದ ಸಮುದ್ರ ಬದಿಯಲ್ಲಿ ಮರಳು ಕಳ್ಳತನ ನಡೆಸುತ್ತಿದ್ದ ವ್ಯಕ್ತಿಯನ್ನು ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿ.ಎನ್ ಅವರು ಬಂಧಿಸಿದ್ದಾರೆ.
- ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ (ಕಾ.ಸು) ತಿಮ್ಮೇಶ್ ಬಿ ಎನ್ ಅವರಿಗೆ ದಿನಾಂಕ : 06-12-2023 ರಂದು ಉಪ್ಪುಂದ ಗ್ರಾಮದ ಕರ್ಕಿಕಳಿ ಎಂಬಲ್ಲಿ ಸಮುದ್ರ ಬದಿಯಲ್ಲಿ ಆರೋಪಿ ಪ್ರವೀಣಚಂದ್ರ (53), ಉಪ್ಪುಂದ ಗ್ರಾಮ, ಬೈಂದೂರು ಎಂಬವನು ಪ್ಲಾಸ್ಟಿಕ್ ಚೀಲದಲ್ಲಿ ಮರಳು ತುಂಬಿಸಿ KA-20-B-5027 ನೇ ಓಮಿನಿಯಲ್ಲಿ ಸಾಗಾಟ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ಬಂದ ಮಾಹಿತಿ ಮೇರೆಗೆ ಕೂಡಲೇ ಸ್ಥಳಕ್ಕೆ ಹೋದಾಗ ಪ್ರವೀಣ ಚಂದ್ರ ಎಂಬವನು ಪ್ಲಾಸ್ಟಿಕ್ ಚೀಲದಲ್ಲಿ ಮರಳು ತುಂಬಿಸಿ ಸಾಗಾಟ ಮಾಡುವುದು ಕಂಡು ಬಂದಿರುತ್ತದೆ ಎನ್ನಲಾಗಿದೆ .
- ಪೊಲೀಸರು ಸ್ಥಳದಲ್ಲಿ ಪರಿಶೀಲಿಸಿದಾಗ ಆರೋಪಿ ಪ್ರವೀಣ ಚಂದ್ರನು ಸಿಮೆಂಟ್ ಖಾಲಿ ಚೀಲದಲ್ಲಿ ಅರ್ಧದಷ್ಟು ಮರಳು ತುಂಬಿದ 25 ಚೀಲ ಓಮಿನಿಯಲ್ಲಿ ಇಟ್ಟು ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಆರೋಪಿ ಪ್ರವೀಣ ಚಂದ್ರನು ಯಾವುದೇ ಪರವಾನಿಗೆ ಇಲ್ಲದೇ ಅರಬ್ಬಿ ಸಮುದ್ರದಿಂದ ಮರಳನ್ನು ಕಳವು ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವ ಇರಾದೆ ಹೊಂದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಮರಳು ಹಾಗೂ ಓಮಿನಿಯನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
- ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.