Spread the love

ಉಡುಪಿ: ದಿನಾಂಕ :27-11-2023( ಹಾಯ್ ಉಡುಪಿ ನ್ಯೂಸ್ ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿಯ ರೆಸಿಡೆನ್ಸಿ ಕಟ್ಟಡವೊಂದರ ಕೊಠಡಿಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರು ಯುವಕರನ್ನು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾದ ಜಯಾನಂದ ಕೆ ಅವರು ಬಂಧಿಸಿದ್ದಾರೆ.

ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾದ ಜಯಾನಂದ ಕೆ ಅವರಿಗೆ ದಿನಾಂಕ :26-11-2023 ರಂದು,ಮಣಿಪಾಲದ ಸಿಂಡಿಕೇಟ್‌ ಸರ್ಕಲ್‌ ಬಳಿ ಇರುವ ಉನ್ನತ ರೆಸಿಡೆನ್ಸಿಯ 101 ಮತ್ತು 102 ರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದಂತೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಗಣೇಶ್‌, ಸುಧೀರ್‌ ಮತ್ತು ಮಾರುತಿ ಎಂಬವರನ್ನು ಬಂಧಿಸಿ ದಸ್ತಗಿರಿ ಮಾಡಿ ಕೃತ್ಯಕ್ಕೆ ಸಂಬಂಧಿಸಿದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಇಬ್ಬರು ಸಂತ್ರಸ್ಥ ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ . ವೇಶ್ಯಾವಾಟಿಕೆ ಪ್ರಕರಣದ ಮೂವರು ಆಪಾದಿತರು  ಜಗದೀಶ ಯಾನೆ ಜಗ್ಗ ಎಂಬವನೊಡನೆ ಸೇರಿ ವೇಶ್ಯಾವಾಟಿಕೆ ದಂಧೆ ನಡೆಸಿ ಅಕ್ರಮ ಲಾಭ ಪಡೆಯುತ್ತಿದ್ದಾರೆ ಎಂದು ಪೊಲೀಸ್ ತನಿಖೆ ಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ   ಕಲಂ: 370(ಎ)(2) ಐಪಿಸಿ ಮತ್ತು 3, 4, 5, 6 ಮತ್ತು 7 Immoral Traffic ( Prevention) Act 1956 ರಂತೆ ಪ್ರಕರಣ ದಾಖಲಾಗಿದೆ..  

error: No Copying!