ಕಾರ್ಕಳ: ದಿನಾಂಕ: 12-11-2023(ಹಾಯ್ ಉಡುಪಿ ನ್ಯೂಸ್) ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಪಟಾಕಿ ಗಳನ್ನು ದಾಸ್ತಾನು ಇರಿಸಿದ್ದ ಸಚ್ಚರಿಪೇಟೆಯ ವ್ಯಕ್ತಿ ಯನ್ನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸ್ಪೋಟಕ ನಿಯಮಗಳ ಪ್ರಕಾರ ಪರವಾನಿಗೆ ಪಡೆದುಕೊಂಡು ಕೆಮಿಕಲ್ ಕಡಿಮೆ ಇರುವ ಹಸಿರು ಪಟಾಕಿಗಳನ್ನು ದಾಸ್ತಾನು ಮಾಡಬೇಕಾಗಿದ್ದು, ಪ್ರತ್ಯೇಕವಾದ ಗೋಡಾನ್ ಮಾಡಿ 7 ಅಡಿ ಎತ್ತರದ ಕಂಪೌಂಡನ್ನು ಗೋಡಾನಿನ ಸುತ್ತಲೂ ನಿರ್ಮಿಸಬೇಕಾಗಿದ್ದು, ಸದ್ರಿ ಗೋಡಾನಿನ ಸುತ್ತಲೂ 100 ಮೀಟರ್ ದೂರದಲ್ಲಿ ಯಾವುದೇ ವಾಸದ ಮನೆಗಳು ಇರದಂತೆ ನಿಯಮಗಳು ಇದ್ದರೂ ಕೂಡಾ ಸಚ್ಚರಿಪೇಟೆಯ ನಿವಾಸಿ ಆರೋಪಿ ಶ್ರೀನಿವಾಸ ಕಾಮತ್ (50) ಎಂಬಾತನು ಸಚ್ಚರಿಪೇಟೆ ಎಂಬಲ್ಲಿ ಇರುವ ಇತನ ಶ್ರೀ ನವದುರ್ಗಾ ಫ್ಯಾನ್ಸಿ & ಜನರಲ್ ಸ್ಟೋರ್ಸ ಎಂಬ ಅಂಗಡಿಯಲ್ಲಿ ಸ್ಪೋಟಕ ವಸ್ತುಗಳನ್ನು ದಾಸ್ತಾನು ಇರಿಸಿದ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ದಿಲೀಪ್ ಜಿ.ಆರ್ ರವರಿಗೆ ಸಾರ್ವಜನಿಕ ರಿಂದ ಮಾಹಿತಿ ಬಂದಿದ್ದು ಕೂಡಲೇ ದಾಳಿ ನಡೆಸಿ ಆರೋಪಿ ಶ್ರೀನಿವಾಸ ಕಾಮತ್ ನನ್ನು ಬಂಧಿಸಿ ಸುಮಾರು 41370/- ರೂ ಮೌಲ್ಯದ 38 ಕೆ,ಜಿ ಸ್ಪೋಟಕ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 9B(1)(b) Explosive Act – 1884, ಕಲಂ: 286 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.