Spread the love
  • ಕೋಟ: ದಿನಾಂಕ: 11-11-2023( ಹಾಯ್ ಉಡುಪಿ ನ್ಯೂಸ್) ಯಾವುದೋ ವಿಷಯಕ್ಕೆ ಸಂಬಂಧಿಸಿ ಯುವಕನೋರ್ವ ಗಂಭೀರ ಹಲ್ಲೆ ನಡೆಸಿರುವ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
  • ಕೋಟತಟ್ಟು ನಿವಾಸಿ ಚೇತನ್ (27) ಎಂಬವರು ದಿನಾಂಕ 09/11/2023 ರಂದು ಸಾಸ್ತಾನ ಗರಡಿ ರಸ್ತೆಯಲ್ಲಿ ರಾತ್ರಿ ನಡೆದುಕೊಂಡು ಹೋಗುತ್ತಿರುವಾಗ, ಅಕ್ಷಯ ಎಂಬವನು ಏಕಾಏಕಿಯಾಗಿ ಚೇತನ್ ರನ್ನು ತಡೆದು ನಿಲ್ಲಿಸಿ, ನೀನು ನಮ್ಮವರ ವಿಚಾರಕ್ಕೆ ಬರುತ್ತೀಯಾ ಊರಿನಲ್ಲಿ ನೀನು ದೊಡ್ಡ ಜನವ ಎಂದು ಅವಾಚ್ಯ ಶಬ್ದದಿಂದ ಬೈದು, ಅಲ್ಲಿದ್ದ ಕಲ್ಲು ಮತ್ತು ಬಾಟಲಿಯಿಂದ ಚೇತನ್ ರನ್ನು ಕೊಲ್ಲುವ ಉದ್ದೇಶದಿಂದ ತಲೆಗೆ ಹಾಗೂ ಎಡ ಭುಜಕ್ಕೆ ಹೊಡೆದಾಗ ಚೇತನ್ ರವರು ಬೊಬ್ಬೆ ಹಾಕಿದಾಗ ಪರಿಚಯದ ಪ್ರದೀಪ ಎಂಬವರು ಬಂದು ಹೊಡೆಯುವುದನ್ನು ಬಿಡಿಸಿದ್ದು, ಆಗ ಅಕ್ಷಯನು ನಿನ್ನ ಕೈಕಾಲು ಮುರಿದು ತಲೆ ಒಡೆದು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿದ್ದಾನೆ ಎಂದು ಚೇತನ್ ಪೊಲೀಸರಿಗೆ ದೂರಿದ್ದಾರೆ.
  • ಚೇತನ್ ರವರು ಕೋಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ  ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುತ್ತಾರೆ .
  • ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಕಲಂ: 341,307,504, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

error: No Copying!