ಕೊಲ್ಲೂರು: ದಿನಾಂಕ: 02:11:2023( ಹಾಯ್ ಉಡುಪಿ ನ್ಯೂಸ್) ವಿದೇಶದಲ್ಲಿ ಉದ್ಯೋಗದಲ್ಲಿರುವ ಪ್ರಸ್ತುತ ಬೆಂಗಳೂರಿನ ನಿವಾಸಿ ಯಾಗಿರುವ ದಿಲ್ನಾ ಎಂಬವರಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯನೆಂದು ಕೊಂಡವ 31ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು ನಿವಾಸಿಯಾದ ದಿಲ್ನಾ ಎಂಬವರು ಕಳೆದ ವರ್ಷ ತನ್ನ ಗಂಡ ಮತ್ತು ತನ್ನ ಸಂಸಾರದೊಂದಿಗೆ ಕೊಲ್ಲೂರು ದೇವಸ್ಥಾನಕ್ಕೆ ಬಂದಾಗ ದಿಲ್ನಾ ಅವರ ಅಣ್ಣನಿಗೆ ಕೆಲವು ಸಮಯದಿಂದ ಪರಿಚಯವಿದ್ದ ಸುಧೀರ ಕುಮಾರ ಎಂಬಾತನು ಪರಿಚಯವಾಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸುಧೀರ ಕುಮಾರನು ತಾನು ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯನೆಂದು ದಿಲ್ನಾ ರವರನ್ನು ನಂಬಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ ಹಣ ಹಾಕುವಂತೆ ಕೇಳಿದ್ದು ವಿದೇಶದಲ್ಲಿರುವ ದಿಲ್ನಾ ಮತ್ತು ಅವರ ಅಣ್ಣ ದಿಲೀಶ್ ರವರಿಂದ ಹಲವು ಭಾರಿ ಸುಧೀರ ಕುಮಾರ ತನ್ನ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡಿರುತ್ತಾನೆ ಎಂದು ದೂರಿದ್ದಾರೆ.
ಅಲ್ಲದೇ ದಿಲ್ನಾ ರವರ ತಾಯಿಗೆ ಸಂಬಂದಿಸಿದ ಜಾಗದ ಖಾತೆ ಬದಲಾವಣೆ ಮಾಡಿಸಿಕೊಡುವುದಾಗಿ ಹೇಳಿ ನಂಬಿಸಿ ಖಾತೆಗೆ ಹಣ ಹಾಕಿಸಿಕೊಂಡಿದ್ದು ಅಲ್ಲದೇ ದಿಲ್ನಾರವರ ತಾಯಿ ಬಳಿ ಜಾಗದ ಖಾತೆ ಬದಲಾವಣೆ ಬಗ್ಗೆ ಕೆಲವು ಸಹಿ ಯನ್ನು ಹಾಕಿ ಕೊಡುವಂತೆ ಹೇಳಿ ಸಹಿ ಹಾಕಿಸಿ ಕೊಂಡಿರುತ್ತಾನೆ ಎಂದು ದೂರಿದ್ದಾರೆ.
ಸುಧೀರ ಕುಮಾರನು ಹಣ ವನ್ನು ಪಡೆದು ದೇವಸ್ಥಾನದಲ್ಲಿ ಯಾವುದೇ ಪೂಜೆ ಮಾಡಿಸದೇ ಇರುವುದಲ್ಲದೆ ; ಜಾಗದ ಖಾತೆ ಬದಲಾವಣೆಯನ್ನು ಕೂಡಾ ಮಾಡದೇ ಇದ್ದು ಈ ಬಗ್ಗೆ ದಿಲ್ನಾರವರು ಅನುಮಾನಗೊಂಡು ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನಕ್ಕೆ ಬಂದು ಸಂಬಂದ ಪಟ್ಟವರಲ್ಲಿ ವಿಚಾರಿಸಿದಾಗ ಸುಧೀರ ಕುಮಾರ ಎಂಬವನು ದೇವಸ್ಥಾನದ ಅಡಳಿತ ಮಂಡಳಿಯ ಸದಸ್ಯನು ಆಗಿರದೇ ಅವನಿಗೂ ದೇವಸ್ಥಾನಕ್ಕೆ ಯಾವುದೇ ರೀತಿಯೂ ಸಂಬಂದವಿರದ ವ್ಯಕ್ತಿ ಎಂದು ತಿಳಿಸಿರುತ್ತಾರೆ ಎಂದಿದ್ದಾರೆ.
ದಿಲ್ನಾರವರಿಗೆ ಮತ್ತು ಅವರ ಅಣ್ಣ ದಿಲೀಶ್ ರವರಿಗೆ ಸುಧೀರ ಕುಮಾರನು ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿಯ ಸಡದಸ್ಯನೆಂದು ಹೇಳಿ ಪೂಜೆ ಮಾಡಿಸುವುದಾಗಿಯೂ ಮತ್ತು ದಿಲ್ನಾ ರವರ ತಾಯಿಗೆ ಸಂಬಂದಿಸಿದ ಜಾಗದ ಖಾತೆಯ ಬದಲಾವಣೆ ಮಾಡಿಸಿ ಕೊಡುವುದಾಗಿ ನಂಬಿಸಿ ದಿಲ್ನಾರವರಿಗೂ ಮತ್ತು ಅಣ್ಣ ದಿಲೀಶ್ ರವರಿಗೆ ಒಟ್ಟು 30,73,600/- ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ: 403,417,420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.