- ಹಿರಿಯಡ್ಕ: ದಿನಾಂಕ: 27-10-2023(ಹಾಯ್ ಉಡುಪಿ ನ್ಯೂಸ್) ವಯೋವೃದ್ಧ ಮಹಿಳೆ ಯೋರ್ವರ ಹೆಬ್ಬೆಟ್ಟನ್ನು ಫೋರ್ಜರಿ ಮಾಡಿ ಆಕೆಯ ಸ್ಥಿರಾಸ್ತಿ ಯಲ್ಲಿ ವಂಚನೆ ನೆಡೆಸಿದ್ದಾರೆ ಎಂದು ನೊಂದ ವ್ರಧ್ಧೆ ಪೊಲೀಸರಿಗೆ ದೂರು ನೀಡಿದ್ದಾರೆ.
- ಪೆರ್ಡೂರು ಗ್ರಾಮದ ಈರ್ ಬೆಟ್ಟು ದಿ.ರುದ್ರಯ್ಯ ಆಚಾರಿ ಎಂಬವರ ಪತ್ನಿಯಾದ ವನಜಾ ಆಚಾರ್ತಿ (82) ಎಂಬವರ ಸ್ಥಿರಾಸ್ಥಿಯ ಸರ್ವೆ ನಂಬ್ರ 2-2 ರ ಪೂರ್ವ ದಿಕ್ಕಿನಲ್ಲಿ ಕೃಷ್ಣ ಶೆಟ್ಟಿ ಎಂಬವರ ಸರ್ವೆ ನಂಬ್ರ 2- 16 ಸ್ಥಿರಾಸ್ಥಿಯಲ್ಲಿ ಕೃಷ್ಣ ಶೆಟ್ಟಿ ರವರ ಮಗಳಾದ ರೇವತಿ ಶೆಟ್ಟಿ ಎಂಬವರು ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ವನಜಾ ಆಚಾರ್ತಿ ಯವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
- ಕೃಷ್ಣ ಶೆಟ್ಟಿ , ರೇವತಿ ಶೆಟ್ಟಿ ಮತ್ತು ಬಿ, ಪದ್ಮರಾಜ್‌ರಾವ್ ಎಂಬವರು ಸೇರಿಕೊಂಡು ಮೋಸ, ವಂಚನೆ ಮಾಡುತ್ತಿರುವ ಬಗ್ಗೆ ತಿಳಿದು ವನಜಾ ಆಚಾರ್ತಿ ಯವರು ತನಗೆ ಸಂಬಂದಿಸಿದ ಸ್ಥಿರಾಸ್ಥಿಯ ದಾಖಲಾತಿಯನ್ನು ಮಾಹಿತಿ ಹಕ್ಕು ಅಧೀನಿಯಮದಂತೆ ಪಡೆದು ಪರಿಶೀಲಿಸಿದಾಗ ಬಿ, ಪದ್ಮರಾಜ್ ಎಂಬಾತ ತನ್ನ ಹೆಬ್ಬೆರಳಿನ ಗುರುತನ್ನು ದಾಖಲಿಸಿ ವನಜಾ ಆಚಾರ್ತಿಯವರ ಒಪ್ಪಿಗೆ ಇಲ್ಲದೆ ಕೃಷ್ಣ ಶೆಟ್ಟಿ ಎಂಬುವವರ ಸ್ಥಿರಾಸ್ಥಿಯ ಭೂ ಪರಿವರ್ತನೆಗೆ ಸಂಬಂಧಿಸಿ ವನಜಾ ಆಚಾರ್ತಿಯವರ ಜಾಗದಲ್ಲಿನ ರಸ್ತೆಯನ್ನು ಬಿಟ್ಟುಕೊಡುವ ಬಗ್ಗೆ ನಕಲಿ ಒಪ್ಪಿಗೆ ಪತ್ರವನ್ನು ತಯಾರಿಸಿ ಸಲ್ಲಿಸಿರುವುದು ಕಂಡು ಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
- ಬಿ. ಪದ್ಮರಾಜ್‌ರಾವ್ ಹಾಗೂ ಕೃಷ್ಣ ಶೆಟ್ಟಿ ಮತ್ತು ರೇವತಿ ಶೆಟ್ಟಿ ಇವರೆಲ್ಲರೂ ಸೇರಿ ವಂಚನೆ ಮಾಡುವ ಉದ್ದೇಶದಿಂದ ವನಜಾ ಆಚಾರ್ತಿ ಯವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವನಜಾ ಆಚಾರ್ತಿಯವರ ಬೆರಳಿನ ಗುರುತನ್ನು ಫೋರ್ಜರಿ ಮಾಡಿ ವಂಚನೆ ಮಾಡಿರುತ್ತಾರೆ ಎಂದು ವನಜಾ ಆಚಾರ್ತಿಯವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: : 468, 471, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.