ಕಾರ್ಕಳ: ದಿನಾಂಕ:24-10-2023(ಹಾಯ್ ಉಡುಪಿ ನ್ಯೂಸ್) ಕಾಣೆಯಾಗಿದ್ದ ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರತಿನ್ ಶೆಟ್ಟಿ ರವರ ಮ್ರತ ದೇಹವು ಬಾವಿಯೊಂದರಲ್ಲಿ ಪತ್ತೆಯಾಗಿದೆ. ಅವರ ಸಾವಿಗೆ ಕಾರಣವೇನೆಂದು ಸಮಗ್ರ ತನಿಖೆಯಿಂದ ಇನ್ನಷ್ಟೇ ತಿಳಿಯ ಬೇಕಾಗಿದೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಶ್ರತಿನ್ ಶೆಟ್ಟಿ (35) ಎಂಬವರು ದಿನಾಂಕ 15/10/2023 ರಂದು ಕಾಪು ತಾಲೂಕು ಮಜೂರು ಗ್ರಾಮದಲ್ಲಿರುವ ತನ್ನ ಮನೆಯಿಂದ ರಾತ್ರಿ ಊಟ ಮಾಡಿ ಮನೆಯಿಂದ ಕರ್ತವ್ಯಕ್ಕೆಂದು ಹೇಳಿ ಹೋಗಿದ್ದರು ಎಂದು ಅವರ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಕರ್ತವ್ಯಕ್ಕೆಂದು ಹೋದವರು ನಂತರ ಮನೆಗೆ ಫೋನ್ ಮಾಡಿ ಮಾತನಾಡುತ್ತಿದ್ದು ದಿನಾಂಕ 19/10/2023 ರಂದು ಬೆಳಿಗ್ಗೆ 07:30 ಗಂಟೆಗೆ ಹೆಂಡತಿಗೆ ಫೋನ್ ಮಾಡಿ ಮನೆಗೆ ಬರುತ್ತೇನೆಂದು ತಿಳಿಸಿದ್ದು ನಂತರ ಫೋನ್ ಸ್ವಿಚ್ ಆಫ್ ಆಗಿರುತ್ತದೆ.ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಶ್ರತಿನ್ ಶೆಟ್ಟಿ ಆ ನಂತರ ಕಾಣೆಯಾಗಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 23/10/2023 ರಂದು ಬೆಳಿಗ್ಗೆ 11:00 ಗಂಟೆಗೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್ ಬಳಿ ಇರುವ ಶ್ರೀ ಲಕ್ಷ್ಮಿದೇವಿ ಕಲ್ಯಾಣ ಮಂಟಪದ ಬಳಿ ಮೃತದೇಹವೊಂದು ಇರುವುದು ಕಂಡುಬಂದಿದ್ದು, ಅಗ್ನಿಶಾಮಕ ದಳದಿಂದ ಮೃತದೇಹವನ್ನು ಮೇಲಕ್ಕೆ ಎತ್ತಿ ನೋಡಿದಾಗ ಅದು ಮೃತ ಶೃತಿನ್ ಶೆಟ್ಟಿರವರ ಮೃತದೇಹವಾಗಿದ್ದು, ಶೃತಿನ್ ಶೆಟ್ಟಿರವರು ಯಾವುದೋ ಕಾರಣದಿಂದ ಮನಸ್ಸಿಗೆ ಬೇಸರಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೂರು ದಾಖಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿದೆ.