Spread the love

  • ಬ್ರಹ್ಮಾವರ: ದಿನಾಂಕ 23/10/2023 (ಹಾಯ್ ಉಡುಪಿ ನ್ಯೂಸ್) ಬ್ರಹ್ಮಾವರದ ಸಾರ್ವಜನಿಕ ಸ್ಥಳಗಳಲ್ಲಿ ಮಟ್ಕಾ ಜುಗಾರಿ ದಂಧೆ ನಡೆಸುತ್ತಿದ್ದ ಇಬ್ಬರನ್ನು ಬ್ರಹ್ಮಾವರ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಅವರು ಬಂಧಿಸಿದ್ದಾರೆ.
  • ಬ್ರಹ್ಮಾವರ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ರಾಜಶೇಖರ ವಂದಲಿ ಅವರಿಗೆ ದಿನಾಂಕ:22-10-2023ರಂದು ಆರೋಪಿ ಕೇಶವ, ಬ್ರಹ್ಮಾವರ ಎಂಬವನು ಮಟ್ಕಾ ಜುಗಾರಿ ಆಟ ನಡೆಸುತ್ತಿರುವುದಾಗಿ ಮಾಹಿತಿ ಬಂದಿದ್ದು ಆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನು ಸಂಗ್ರಹಿಸಿದ ಹಣವನ್ನು ಸಚಿನ್‌ ಎಂಬಾತನಿಗೆ ನೀಡುತ್ತಿದ್ದು, ಆತನು ತನಗೆ ಕಮಿಷನ್‌ ನೀಡುತ್ತಿರುವುದಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ.
  • ಕೇಶವನು  ಮಟ್ಕಾ ಜೂಜಾಟಕ್ಕೆ ಸಂಗ್ರಹಿಸಿದ ನಗದು ಹಣ ರೂಪಾಯಿ 1030/-, ಮಟ್ಕಾ ನಂಬ್ರ ಬರೆದ  ಚೀಟಿ -1, ಹಾಗೂ ಒಂದು ಬಾಲ್ ಪೆನ್ ಅನ್ನು ವಶಪಡಿಸಿಕೊಂಡಿದ್ದಾರೆ.
  • ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಕಲಂ: 78 (I) (III) KP ACT  ರಂತೆ ಪ್ರಕರಣ ದಾಖಲಾಗಿದೆ.
  • ಇನ್ನೊಬ್ಬ ಆರೋಪಿ ರಾಜು, ಬ್ರಹ್ಮಾವರ ಎಂಬಾತ ಮಟ್ಕಾ ಜುಗಾರಿ ಆಟ ನಡೆಸುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ರಾಜಶೇಖರ ವಂದಲಿ ಅವರು ಅಲ್ಲಿಗೂ ದಾಳಿ ನಡೆಸಿ ಆತನನ್ನು ಬಂಧಿಸಿ ಆತನಿಂದ ಮಟ್ಕಾ ಜೂಜಾಟಕ್ಕೆ ಸಂಗ್ರಹಿಸಿದ ನಗದು ಹಣ ರೂಪಾಯಿ 1075/-, ಮಟ್ಕಾ ನಂಬ್ರ ಬರೆದ  ಚೀಟಿ -1, ಹಾಗೂ ಒಂದು ಬಾಲ್ ಪೆನ್ ಅನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ .
  • . ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಕಲಂ: 78 (I) (III) KP ACT  ರಂತೆ ಪ್ರಕರಣ ದಾಖಲಾಗಿದೆ.

error: No Copying!