Spread the love

ಕಾರ್ಕಳ: ದಿನಾಂಕ : 17/10/2023 (ಹಾಯ್ ಉಡುಪಿ ನ್ಯೂಸ್) ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ನಕಲಿ ನಂಬರ್ ಪ್ಲೇಟ್ ಮತ್ತು ಟಿಂಟ್ ಗ್ಲಾಸ್ ಅಳವಡಿಸಿದ ಕಾರಿನಲ್ಲಿ ಯಾವುದೋ ದುಷ್ಕೃತ್ಯ ನಡೆಸಲು ಸಂಚರಿಸುತ್ತಿದ್ದ ವ್ಯಕ್ತಿ ಯೋರ್ವನನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುಬ್ರಹ್ಮಣ್ಯ ಹೆಚ್ ರವರು ಬಂಧಿಸಿದ್ದಾರೆ.

ಕಾರ್ಕಳ ನಗರ  ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ಸುಬ್ರಹ್ಮಣ್ಯ ಹೆಚ್ ಅವರು  ದಿನಾಂಕ: 16-10-2023ರಂದು ಸಿಬ್ಬಂದಿಯವರೊಂದಿಗೆ  ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಉಮ್ಮರ್ ಫಾರುಕ್ ಎಂಬವನು KA-19-MG-7844 ನಂಬರ್ ಪ್ಲೇಟ್ ಅಳವಡಿಸಿದ ಕಾರಿನ  ಗ್ಲಾಸುಗಳಿಗೆ  ಟಿಂಟ್  ಅಳವಡಿಸಿ   ಚಲಾಯಿಸಿಕೊಂಡು  ಬಂದಿದ್ದು, ಅತನನ್ನು ಪೊಲೀಸರು ಹಿಡಿದು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ನಡೆಸಿದಾಗ ಆತನು ಮಂಗಳೂರಿನ ಧೀರಜ್ ಮತ್ತು ಪ್ರೀತಮ್ ಎಂಬುವವರೊಂದಿಗೆ ಸೇರಿಕೊಂಡು  MH-12-PT-158 ನೋಂದಣಿ ಸಂಖ್ಯೆಯ ಮಾರುತಿ  ಸುಜುಕಿ ಬಲೆನೋ ಕಾರಿಗೆ   KA-19-MG-7844 ನಕಲಿ ನಂಬ್ರ ಪ್ಲೇಟುಗಳನ್ನು ಅಳವಡಿಸಿದ್ದಾಗಿ ತಿಳಿಸಿದ್ದು   ಆತನು ಸರಕಾರಕ್ಕೆ   ಮತ್ತು  ಕಾರಿನ  ನೈಜ  ಮಾಲೀಕರಿಗೆ ಮೋಸ ಮಾಡುವ  ಉದ್ದೇಶದಿಂದ  ಮತ್ತು  ಬೇರೆ ಯಾವುದೋ  ದುರುದ್ದೇಶದಿಂದ ಕಾರಿಗೆ  ನಕಲಿ ನಂಬ್ರ ಪ್ಲೇಟು ಗಳನ್ನು ಮತ್ತು  ಟಿಂಟ್‌ ಅನ್ನು ಅಳವಡಿಸಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 481, 489, 420 ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!