ಶಿರ್ವಾ: ದಿನಾಂಕ: 17-10-2023(ಹಾಯ್ ಉಡುಪಿ ನ್ಯೂಸ್) ಮೂಡುಬೆಳ್ಳೆಯ ಅಂಗಡಿ ಮಾಲಕರೋರ್ವರಿಗೆ ಯುವಕನೋರ್ವ 10 ರೂಪಾಯಿ ಚಿಲ್ಲರೆ ನೀಡಿಲ್ಲ ಎಂಬ ವಿಚಾರದಲ್ಲಿ ಹಲ್ಲೆ ನಡೆಸಿದ ಬಗ್ಗೆ ಅಂಗಡಿ ಮಾಲಕ ಪೊಲೀಸರಿಗೆ ದೂರು ನೀಡಿದ್ದಾರೆ.
ಮೂಡುಬೆಳ್ಳೆ ಕಟ್ಟಿಂಗೇರಿ ಗ್ರಾಮದ ನಾಲ್ಕುಬೀದಿಯಲ್ಲಿ ಅಂಗಡಿ ವ್ಯವಹಾರ ಮಾಡಿಕೊಂಡಿರುವ ರಾಜೇಶ್ (36) ಎಂಬವರು ದಿನಾಂಕ 15/10/2023 ರಂದು ರಾತ್ರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ ಸಮಯ ದೀಕ್ಷಿತ್ ಎಂಬಾತ ಬಂದು ತಂಬಾಕು ನೀಡುವಂತೆ ಕೇಳಿದ್ದು ತಂಬಾಕು ನೀಡಿ ಹಣ ನೀಡಿರುತ್ತಾರೆ. ನಂತರ ದೀಕ್ಷಿತ್ ನು ತನಗೆ 10 ರೂಪಾಯಿ ನೀಡಲು ಬಾಕಿಯಿದೆ ಎಂದು ಕೇಳಿದ್ದು ಅದಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು ನಂತರ ಅಂಗಡಿಯಿಂದ ದೀಕ್ಷಿತ್ ನು ಹೊರಗೆ ಹೋಗಿರುತ್ತಾನೆ ಎಂದು ರಾಜೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಆ ನಂತರ ಅದೇ ವಿಚಾರಕ್ಕಾಗಿ ಪುನ: ರಾಜೇಶ್ ರವರ ಅಂಗಡಿಯೊಳಗೆ ಅಕ್ರಮ ಪ್ರವೇಶ ಮಾಡಿ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಲ್ಲದೇ ಕೈಯಿಂದ ಹಣೆ, ಎಡಕಿವಿ ಕೈಗೆ ಹೊಡೆದು ದೂಡಿರುತ್ತಾನೆ ಎಂದು ರಾಜೇಶ್ ಪೊಲೀಸರಿಗೆ ದೂರಿದ್ದಾರೆ. ಅಂಗಡಿಯಲ್ಲಿನ ಆಹಾರ ಪದಾರ್ಥಗಳನ್ನು ಎತ್ತಿ ಬಿಸಾಡಿ ರಾಜೇಶ್ ರವರಿಗೆ 7000/- ರೂಪಾಯಿ ನಷ್ಟವನ್ನುಂಟು ಮಾಡಿರುತ್ತಾನೆ ಎಂದೂ; ತನಗಾಗಿರುವ ಗಾಯದ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿ ರಾಜೇಶ್ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಕಲಂ: 448, 504, 506, 323, 427 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.