ಕೊಲ್ಲೂರು: ದಿನಾಂಕ 14/10/2023 (ಹಾಯ್ ಉಡುಪಿ ನ್ಯೂಸ್) ಬೆಳ್ಳಾಲ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ನಾಲ್ವರನ್ನು ಕೊಲ್ಲೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಜಯಶ್ರೀ ಹುನ್ನೂರ ಅವರು ಬಂಧಿಸಿದ್ದಾರೆ.
ಕೊಲ್ಲೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಜಯಶ್ರೀ ಹುನ್ನೂರ ರವರಿಗೆ ಕುಂದಾಪುರ ತಾಲೂಕು ಬೆಳ್ಳಾಲ ಗ್ರಾಮದ ಮುಡಮೂಂದ ಹೆಮ್ಮಕ್ಕಿ ಪಾರೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿರಿಸಿ ವೈಯುಕ್ತಿಕ ಲಾಭಕ್ಕೋಸ್ಕರ ಕೋಳಿಗಳ ಕಾಲಿಗೆ ಬಾಳುಕತ್ತಿ ಯನ್ನು ಕಟ್ಟಿ ಕೋಳಿ ಅಂಕದ ಆಟ ನಡೆಸುತ್ತಿರುವುದಾಗಿ ಸಾರ್ವಜನಿಕರಿಂದ ದೊರೆತ ಖಚಿತ ವರ್ತಮಾನದಂತೆ ಕೂಡಲೇ ಜಯಶ್ರೀ ರವರು ಸಿಬ್ಬಂದಿ ಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಧಾಳಿ ನಡೆಸಿದ್ದಾರೆ .
ದಾಳಿ ನಡೆಸಿದಾಗ ಅಲ್ಲಿ ಹಣವನ್ನು ಪಣವನ್ನಾಗಿರಿಸಿ ಕೋಳಿಗಳ ಕಾಲಿಗೆ ಹರಿತವಾದ ಬಾಳು ಕತ್ತಿಯನ್ನು ಕಟ್ಟಿ ಪರಸ್ಪರ ಕಾದಾಡಿ ಹಿಂಸೆಗೊಳ ಪಡುವಂತೆ ಕೋಳಿ ಅಂಕದ ಆಟ ನಡೆಸುತ್ತಿದ್ದ 4 ಜನ ಆಪಾದಿತರನ್ನು ಬಂಧಿಸಿ ವಶಕ್ಕೆ ಪಡೆದು ಅವರು ಕೋಳಿ ಅಂಕದ ಬಗ್ಗೆ ಬಳಸಿದ ಕೆಂಪು – ಕಪ್ಪು ಬಣ್ಣದ ಕೋಳಿ ಹುಂಜ -1 (ಅಂದಾಜು ಮೌಲ್ಯ 500/-) ಕಪ್ಪು – ಬಿಳಿ ಬಣ್ಣದ ಕೋಳಿ ಹುಂಜ-1 (ಅಂದಾಜು ಮೌಲ್ಯ 500/-) ಒಟ್ಟು ಮೌಲ್ಯ ರೂ 1000/-,ಬಾಳುಕತ್ತಿ-2, ಕತ್ತಿ ಕಟ್ಟಲು ಉಪಯೋಗಿಸಿದ ದಾರ- 2 ಹಾಗೂ ಆರೋಪಿಗಳ ವಶದಲ್ಲಿದ್ದ ನಗದು ರೂಪಾಯಿ 600/- ಗಳನ್ನು ಸ್ವಾಧೀನಪಡಿಸಿ ಕೊಂಡಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ: 87, 93 KP ACT ರಂತೆ ಪ್ರಕರಣ ದಾಖಲಾಗಿದೆ.