Spread the love

ಕೋಟ: ದಿನಾಂಕ: 12-10-2023(ಹಾಯ್ ಉಡುಪಿ ನ್ಯೂಸ್) ಸಾಲಿಗ್ರಾಮದಲ್ಲಿ ಜನವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ಅಪಾಯಕಾರಿ ಪಟಾಕಿ, ಸುಡುಮದ್ದು ದಾಸ್ತಾನು ಇರಿಸಿದ್ದ ವ್ಯಕ್ತಿ ಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ ತಹಶೀಲ್ದಾರರು ಹಾಗೂ  ಕುಂದಾಪುರ ಅಗ್ನಿ  ಶಾಮಕ ಠಾಣಾಧಿಕಾರಿಯವರು  ಸರಕಾರದ ಆದೇಶದಂತೆ ದಿನಾಂಕ 11/10/2023 ರಂದು ಪಟಾಕಿ ದಾಸ್ತಾನು  ಮಾಡಿರುವ  ಪರವಾನಿಗೆಗಳನ್ನು ಪರಿಶೀಲನೆ ಮಾಡುವಾಗ ಸಾಲಿಗ್ರಾಮದ ಬಳಿ  ಪಟಾಕಿ  ದಾಸ್ತಾನು  ಇರುವುದು ಅಧಿಕಾರಿಗಳಿಗೆ ತಿಳಿದುಬಂದಿರುತ್ತದೆ.

ಆ  ಸ್ಥಳಕ್ಕೆ ಹೋಗಿ ನೋಡಿ  ಅಂಗಡಿಯ ಮಾಲಿಕನ ಹೆಸರು ವಿಚಾರಿಸಿದಾಗ ಉದಯ ‌‌‌‌‌‌‌(59) ಎಂಬುವುದಾಗಿ ತಿಳಿಸಿದ್ದು, ಆತನಲ್ಲಿ ಪಟಾಕಿಯ ಪರವಾನಿಗೆ  ಬಗ್ಗೆ ಕೇಳಿದಾಗ ಯಾವುದೇ ಪರವಾನಿಗೆ ಇರುವುದಿಲ್ಲವಾಗಿ ಅಧಿಕಾರಿಗಳಲ್ಲಿ ತಿಳಿಸಿರುತ್ತಾನೆ ಎನ್ನಲಾಗಿದೆ.

ಪಟಾಕಿಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿದ್ದು ಹಾಗೂ ಆರೋಪಿಯು ಯಾವುದೇ  ಮುಂಜಾಗ್ರತಾ  ಕ್ರಮಗಳನ್ನು  ಕೈಗೊಳ್ಳದೆ ಮಾನವ  ಪ್ರಾಣಕ್ಕೆ  ಅಪಾಯವಾಗುವ  ರೀತಿಯಲ್ಲಿ  ಪಟಾಕಿಗಳನ್ನು ದಾಸ್ತಾನು ಮಾಡಿ ನಿರ್ಲಕ್ಷ  ವಹಿಸಿದ್ದು, ಕೊಠಡಿಯ ಅಕ್ಕಪಕ್ಕದಲ್ಲಿ ವಾಸ್ತವ್ಯದ ಮನೆ  ಹಾಗೂ ಅಂಗಡಿಗಳು  ಇರುವುದು ಪರಿಶೀಲಿಸಿದಾಗ ಕಂಡುಬಂದಿರುತ್ತದೆ.

  ಕೊಠಡಿಯಲ್ಲಿ  ಅನಧಿಕೃತವಾಗಿ  ಇರಿಸಿದ 19  ಬಾಕ್ಸ್‌‌‌‌ನಲ್ಲಿದ್ದ ಒಟ್ಟು 325.660  ಕೆ.ಜಿ. ಪಟಾಕಿ ಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದು ಅದರ   ಮೌಲ್ಯ  ರೂಪಾಯಿ 50,000/- ಆಗಿರುತ್ತದೆ ಎನ್ನಲಾಗಿದೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಕಲಂ: 286 ಐಪಿಸಿ & 9B(b) of Explosive Act 1884 ರಂತೆ ಪ್ರಕರಣ ದಾಖಲಾಗಿದೆ.

error: No Copying!