ಅಜೆಕಾರು: ದಿನಾಂಕ:07-10-2023 (ಹಾಯ್ ಉಡುಪಿ ನ್ಯೂಸ್) ಶಿರ್ಲಾಲು ಗ್ರಾಮದ ಮಂಗಳ ಬಾಕ್ಯಾರು ಎಂಬಲ್ಲಿ ವ್ಯಕ್ತಿ ಯೋರ್ವ ಮನೆಯೊಂದರ ಗೇಟನ್ನು ಮುರಿದು ಮನೆಯವರಿಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮಂಗಳ ಬಾಕ್ಯಾರು ಎಂಬಲ್ಲಿನ ನಿವಾಸಿ ರಾಜು ಅಣ್ಣಯ್ಯ (73) ಎಂಬವರು ದಿನಾಂಕ:04-10-2023ರಂದು ರಾತ್ರಿ ತನ್ನ ಮನೆಯಲ್ಲಿರುವಾಗ, ಮನೆಯ ಗೇಟಿನ ಶಬ್ದ ಕೇಳಿ, ಗೇಟಿನ ಬಳಿ ಹೋದಾಗ ಥೋಮಸ್ ಡಿಸೋಜಾ ಎಂಬುವವನು ರಾಜು ಅಣ್ಣಯ್ಯ ಅವರನ್ನು ತಡೆದು ಅವಾಚ್ಯ ಶಬ್ದದಿಂದ ಬೈಯ್ದು ಜೀವ ಬೆದರಿಕೆ ಹಾಕಿರುವುದಲ್ಲದೇ, ರಾಜು ಅಣ್ಣಯ್ಯ ಅವರು ಅಳವಡಿಸಿದ 2 ಗೇಟುಗಳನ್ನು ಕಿತ್ತು ಬಿಸಾಡಿ ನಷ್ಟವನ್ನುಂಟು ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಕಲಂ: 341, 427, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.