Spread the love

ಮಣಿಪಾಲ: ದಿನಾಂಕ: 04-10-2023 ರಂದು ಶ್ರೀಮತಿ ಕಲ್ಯಾಣಿ ಬಾಲಕೃಷ್ಣನ್‌ ಎಂಬುವವರು ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ತ್ರಿಶೂರ್‌ನಿಂದ ಮುಂಬೈಗೆ S7 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದು, ರಾತ್ರಿ 22:10 ಗಂಟೆಗೆ ರೈಲು ಮಂಗಳೂರು ಸಮೀಪ ತೋಕೂರು ರೈಲ್ವೇ ನಿಲ್ದಾಣದ ಹತ್ತಿರ ನಿಧಾನಗತಿಯಲ್ಲಿ ಸಂಚರಿಸುತ್ತಿರುವಾಗ ಯಾರೋ ಕಳ್ಳರು ಕಲ್ಯಾಣಿ ಬಾಲಕೃಷ್ಣರವರ ಬ್ಯಾಗನ್ನು ಕಳವು ಮಾಡಿದ್ದು, ಬ್ಯಾಗ್‌ನಲ್ಲಿ 127  ಗ್ರಾಂ ತೂಕದ ಚಿನ್ನಾಭರಣಗಳು, ಮೊಬೈಲ್‌, ಹ್ಯಾಂಡ್‌ ಬ್ಯಾಗ್‌, ಎಸ್‌ಬಿಐ ಕಾರ್ಡ್‌, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಕನ್ನಡಕ ಇತ್ಯಾದಿ ವಸ್ತುಗಳಿದ್ದು, ಅದರ ಒಟ್ಟು ಮೌಲ್ಯ ರೂ. 6,70,000/- ಆಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 04/10/2023 ರಂದು 23:40  ಗಂಟೆಗೆ TTE ಚಂದ್ರಕಾಂತ ಶೇಟ್‌ರವರು ಉಡುಪಿ ರೈಲ್ವೇ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ  ಶ್ರೀಕಾಂತ್‌ ಎಂಬುವವರಿಗೆ ಕಳವು ಮಾಹಿತಿ ನೀಡಿದ್ದು, ಶ್ರೀಕಾಂತ್‌ ರವರು ದಿನಾಂಕ 04/10/2023  ರಂದು ರಾತ್ರಿ 23:55 ಗಂಟೆಗೆ ಉಡುಪಿ ರೈಲ್ವೇ ಪ್ಲ್ಯಾಟ್‌ ಪಾರಂನಲ್ಲಿ ಅನುಮಾನಾಸ್ಪದವಾಗಿ ಇದ್ದ ಸನ್ನಿ ಮಲ್ಹೋತ್ರಾ ಎಂಬಾತನನ್ನು ಪತ್ತೆ ಹಚ್ಚಿ ಇಂದ್ರಾಳಿ ರೈಲ್ವೇ ನಿಲ್ದಾಣದ ಎಎಸ್‌ಐ ಆರ್‌ಪಿಎಫ್‌ ಸುಧೀರ್ ಶೆಟ್ಟಿ ಅವರ ಮುಂದೆ ಹಾಜರುಪಡಿಸಿದ್ದು ಕಳವಾದ ಸ್ವತ್ತಿನ ಪೈಕಿ ಆರೋಪಿಯ ವಶದಲ್ಲಿರುವ 93.17  ಗ್ರಾಂ ಚಿನ್ನಾಭರಣ, ನಗದು ರೂಪಾಯಿ 3,700/-  ಮತ್ತು ಕಲ್ಯಾಣಿ ಬಾಲಕೃಷ್ಣನ್‌ರವರ ATM Card ನ್ನು ವಶಕ್ಕೆ ಪಡೆದು ಆರೋಪಿ ಸನ್ನಿ ಮಲ್ಹೋತ್ರನನ್ನು ಬಂಧಿಸಿ ಮಣಿಪಾಲ ಪೊಲೀಸ್‌ ಠಾಣೆಗೆ ಹಾಜರುಪಡಿಸಿದ್ದು, ಆರೋಪಿಯಿಂದ ವಶಪಡಿಸಲಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂಪಾಯಿ  4,67,620/-   ಆಗಿರುತ್ತದೆ ಎನ್ನಲಾಗಿದೆ.. 

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕಲಂ: 41(1) (d), 102 CrPC ಮತು 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!