Spread the love

ಬೈಂದೂರು: ದಿನಾಂಕ:04-10-2023(ಹಾಯ್ ಉಡುಪಿ ನ್ಯೂಸ್) ಕೇರಳದಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ಕೇರಳದ ರೈಲು ಪ್ರಯಾಣಿಕ ಮಹಿಳೆಯೋರ್ವರ ಚಿನ್ನದ ಸರವನ್ನು ಶಿರೂರು ರೈಲ್ವೇ ಸ್ಟೇಷನ್ ನಲ್ಲಿ ಯಾರೋ ಕಳ್ಳರು ಎಳೆದೊಯ್ದಿರುವ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಕೇರಳ ರಾಜ್ಯದ ನಿವಾಸಿ ಸನಿತಾ ಸುರೇಶ್(53) ಎಂಬವರು ದಿನಾಂಕ 29/09/2023  ರಂದು ಕೊಲ್ಲಮ್  ನಿಂದ  ತಿವಿಮ್ (ಗೋವಾ) ಗೆ ಹೋಗಲು ಕೊಚ್ಚುವೆಲ್ಲಿ- ಇಂದೋರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಾ  ತಮ್ಮ ಸೀಟ್ ನಲ್ಲಿ ಮಲಗಿಕೊಂಡಿದ್ದ ವೇಳೆ ರೈಲು ಸಮಯ  23:15 ಗಂಟೆಗೆ ಬೈಂದೂರು ತಾಲೂಕು  ಶಿರೂರು ಗ್ರಾಮದ ಶಿರೂರು ರೈಲ್ವೆ  ಸ್ಟೇಷನ್ ನಲ್ಲಿ ತಲುಪಿದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಸನಿತಾ ಸುರೇಶ್ ರವರ ಕುತ್ತಿಗೆಯಲ್ಲಿದ್ದ 16 ಗ್ರಾಂ ತೂಕದ 1 ಲಕ್ಷ ಮೌಲ್ಯದ ಚಿನ್ನದ ಸರವನ್ನು ತುಂಡರಿಸಿ ಎಳೆದುಕೊಂಡು ಹೋಗುತ್ತಿರುವಾಗ ಸನಿತಾ ಸುರೇಶ್ ಬೊಬ್ಬೆ ಹಾಕಿದ್ದು ಅಪರಿಚಿತ ವ್ಯಕ್ತಿ ಚಿನ್ನದ ಸರದೊಂದಿಗೆ ರೈಲಿನಿಂದ ಇಳಿದು ಪರಾರಿಯಾಗಿರುತ್ತಾನೆ . ಆತನೊಂದಿಗೆ ಇನ್ನು ಇಬ್ಬರು  ವ್ಯಕ್ತಿಗಳು  ಇರುವುದಾಗಿ ಸನಿತಾ ಸುರೇಶ್ ದಿನಾಂಕ 30/09/2023 ರಂದು ಗೋವಾ ರಾಜ್ಯದ ತಿವಿಂ ರೈಲ್ವೆ  ಪೊಲೀಸ್ ಪೋರ್ಸ್‌ ನಲ್ಲಿ ದೂರು ದಾಖಲಿಸಿದಂತೆ ಸನಿತಾ ಸುರೇಶ್ ರವರ ದೂರನ್ನು ಉಡುಪಿ RPF ಗೆ ಕಳುಹಿಸಿದ್ದು, ಉಡುಪಿ RPF ರವರು ಬೈಂದೂರು ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ವರದಿ ನೀಡಿದ ಮೇರೆಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಕಲಂ: 380 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!