Spread the love

ಕೋಟ: ದಿನಾಂಕ 04/10/2023 (ಹಾಯ್ ಉಡುಪಿ ನ್ಯೂಸ್) ಮೊಳಹಳ್ಳಿ ಗ್ರಾಮದ ಕೋಣಿಹರ ಎಂಬಲ್ಲಿ ಗೂಡಂಗಡಿ ಬಳಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಯನ್ನು ಕೋಟ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಂಭುಲಿಂಗಯ್ಯ ಎಮ್ ಇ ಅವರು ಬಂಧಿಸಿದ್ದಾರೆ.

ಕೋಟ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಶಂಭುಲಿಂಗಯ್ಯ ಎಮ್ ಇ ಅವರಿಗೆ ದಿನಾಂಕ: 03-10-2023 ರಂದು ಮೊಳಹಳ್ಳಿ ಗ್ರಾಮದ ಕೋಣಿಹರ ಎಂಬಲ್ಲಿರುವ ಗೂಡಂಗಡಿಯ ಬಳಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಬಂದ ಗುಪ್ತ ಮಾಹಿತಿಯಂತೆ ಕೂಡಲೇ ಅಲ್ಲಿಗೆ ದಾಳಿ ನಡೆಸಿ ಆರೋಪಿ      ಭಾಸ್ಕರ ಶೆಟ್ಟಿ(75), ಮೊಳಹಳ್ಳಿ ಎಂಬಾತನನ್ನು ಬಂಧಿಸಿ , ಆತನ ವಶದಿಂದ  ಒಂದು ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ Mysore Lancer Whisky ಎಂದು ಬರೆದಿರುವ   ಮದ್ಯ ತುಂಬಿರುವ 90 ಎಂ.ಎಲ್‌‌‌‌‌ ನ 12  ಟೆಟ್ರಾ ಪ್ಯಾಕ್‌‌‌ ಹಾಗೂ  Big Piper  Whisky ಎಂದು ಬರೆದಿರುವ  180  ಎಂ.ಎಲ್‌‌‌‌‌.  ನ 4 ಟೆಟ್ರಾ ಪ್ಯಾಕ್‌‌‌.ಹಾಗೂ  ಸ್ಥಳದಲ್ಲಿ ಖಾಲಿ ನೀರಿನ ಬಾಟಲಿ-1. ಹಾಗೂ ಖಾಲಿ ಮಾಡಿದ  ಎರಡು  ಮೈಸೂರು ಲ್ಯಾನ್ಸರ್ ವಿಸ್ಕಿ ಪ್ಯಾಕ್,  ವಶದಲ್ಲಿದ್ದ ರೂಪಾಯಿ 70/- ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ ಎನ್ನಲಾಗಿದೆ. 

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರ ಕಲಂ: 15(A) , 32(3) KE ACT ರಂತೆ ಪ್ರಕರಣ ದಾಖಲಾಗಿರುತ್ತದೆ.

error: No Copying!