
ಮಲ್ಪೆ: ದಿನಾಂಕ : 03/10/2023(ಹಾಯ್ ಉಡುಪಿ ನ್ಯೂಸ್) ಮಲ್ಪೆ ಬೀಚ್ ನ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಐದು ಜನರನ್ನು ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಗುರುನಾಥ್ ಬಿ ಹಾದಿಮನಿ ಅವರು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಗುರುನಾಥ್ ಬಿ ಹಾದಿಮನಿ ಅವರಿಗೆ ದಿನಾಂಕ : 02-10-2023 ರಂದು ಬೆಳಿಗ್ಗೆ ಮಲ್ಪೆ ಬೀಚಿನಲ್ಲಿ 5 ಜನ ವ್ಯಕ್ತಿಗಳು ಮಧ್ಯಪಾನ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ಹೋಗಿ ನೋಡಿದಾಗ ಮಲ್ಪೆ ಬೀಚ್ ನ Hai Tide ಬೀಚ್ ಪ್ರೆಂಟ್ ಕ್ವಾಟೇಜ್ ಎದುರು ಸಮುದ್ರ ಕಿನಾರೆ ಬಳಿಯಲ್ಲಿ 1) ಶಶಿಕುಮಾರ್ ಜಿ, 2) ಗೋಪಿಕೃಷ್ಣ, 3) ಇರ್ಪಾನ್ , 4) ಮಧುಸೂದನ್ ಕೆಎಲ್, 5) ಅನಿಲ್ ಎಂಬವರು 4 ಬಿಯರ್ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡು ಒಬ್ಬನು ಬೀಯರ್ ಸೇವನೆ ಮಾಡುತ್ತಿದ್ದು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಿರುತ್ತಾರೆ ಎಂದು ಅವರನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 15(A) KE act ರಂತೆ ಪ್ರಕರಣ ದಾಖಲಾಗಿದೆ.