ಬೈಂದೂರು: ದಿನಾಂಕ: 02-10-2023(ಹಾಯ್ ಉಡುಪಿ ನ್ಯೂಸ್) ಕಾಲ್ತೋಡು ಗ್ರಾಮದ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಲ್ಲಿಗೆ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಗೌಡ ಅವರು ದಾಳಿ ನಡೆಸಿ ಮದ್ಯ ವನ್ನು ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ್ ಗೌಡ ಇವರಿಗೆ ದಿನಾಂಕ:02-10-2023ರಂದು ಕಾಲ್ತೋಡು ಗ್ರಾಮದ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಬಂದ ಸಾರ್ವಜನಿಕ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿದ್ದು ಮದ್ಯಮಾರಾಟ ಮಾಡುತ್ತಿದ್ದ ಕೃಷ್ಣ ಎಂಬಾತ ಓಡಿ ಹೋಗಿರುತ್ತಾನೆ ಎನ್ನಲಾಗಿದೆ.
ಆತ ಮದ್ಯ ಮಾರಾಟ ಮಾಡಲು ಬಳಸಿದ KA-20-EJ-4881 HONDA ACTIVA ಸ್ಕೂಟರ್, 90 ಮಿ.ಲೀ ನ ಮಧ್ಯ ತುಂಬಿರುವ HAYWARDS CHEERS WHISKY 31 ಟೆಟ್ರಾ ಪ್ಯಾಕೇಟುಗಳು ಹಾಗೂ ಒಂದು ಪ್ಲಾಸ್ಟಿಕ್ ಚೀಲವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಮದ್ಯದ ಮೌಲ್ಯ 1240/- ರೂಪಾಯಿ ಹಾಗೂ ವಾಹನದ ಮೌಲ್ಯ 35,000/- ರೂಪಾಯಿ ಆಗಿರುತ್ತದೆ ಎನ್ನಲಾಗಿದೆ. ದಿನಾಂಕ 02/10/2023 ರಂದು ಗಾಂಧಿ ಜಯಂತಿ ಆಗಿದ್ದು ಸರಕಾರದಿಂದ ಮಧ್ಯ ಮಾರಾಟ ನಿಷೇಧ ಇದ್ದು ಆಪಾದಿತ ಕೃಷ್ಣ ಈ ವಿಚಾರ ತಿಳಿದು ಕೂಡ ಸರಕಾರದ ಆದೇಶವನ್ನು ಉಲ್ಲಂಘಿಸಿ ಯಾವುದೇ ಪರವಾನಿಗೆ ಇಲ್ಲದೇ ಮಧ್ಯ ಮಾರಾಟ ಮಾಡಿರುತ್ತಾನೆ ಎನ್ನಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ ಮತ್ತು ಕಲಂ: 188 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.