- ಬ್ರಹ್ಮಾವರ: ದಿನಾಂಕ 16/09//2023 (ಹಾಯ್ ಉಡುಪಿ ನ್ಯೂಸ್) ಸಾಯಿಬರ ಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಜನರಲ್ ಸ್ಟೋರ್ ನಲ್ಲಿ ಮಟ್ಕಾ ಜುಗಾರಿ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರಾಜಶೇಖರ ವಂದಲಿ ಅವರು ಬಂಧಿಸಿದ್ದಾರೆ.
- ಬ್ರಹ್ಮಾವರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ರಾಜಶೇಖರ ವಂದಲಿ ಅವರು ದಿನಾಂಕ : 15-09-2023 ರಂದು ಠಾಣೆಯಲ್ಲಿರುವಾಗ ಯಡ್ತಾಡಿ ಗ್ರಾಮದ ಸಾಯಿಬರಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಶ್ರೀ ವಿನಾಯಕ ಜನರಲ್ ಸ್ಟೋರ್ಸ್ ನಲ್ಲಿ ಆರೋಪಿ ಗಿರೀಶ್ ಎಂಬವನು ಮಟ್ಕಾ ಜೂಜಾಟ ನಡೆಸುತ್ತಿದ್ದಾನೆ ಎಂದು ಸಾರ್ವಜನಿಕರಿಂದ ಮಾಹಿತಿ ಸಿಕ್ಕಿದ ಮೇರೆಗೆ ಕೂಡಲೇ ಠಾಣಾ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಆರೋಪಿಯು ಸಾರ್ವಜನಿಕರನ್ನು ಸೇರಿಸಿಕೊಂಡು ಸಣ್ಣ ಒಂದು ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದು ಅವರಿಗೆ ಚೀಟಿಯನ್ನು ಬರೆದು ಕೊಟ್ಟು ಮಟ್ಕಾ ಜುಗಾರಿ ನಡೆಸುತ್ತಿದ್ದಾಗ ಸಿಬ್ಬಂದಿಯವರೊಂದಿಗೆ ಧಾಳಿ ನಡೆಸಿ ಆರೋಪಿಯನ್ನು ಹಿಡಿದು ಬಂಧಿಸಿ ವಿಚಾರಣೆ ನಡೆಸಿದಾಗ ತಾನು ತನ್ನ ಸ್ವಂತ ಲಾಭಕ್ಕೋಸ್ಕರ ಮಟ್ಕಾ ಜುಗಾರಿ ನಡೆಸುತ್ತಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ ಎನ್ನಲಾಗಿದೆ.
- ಆರೋಪಿ ಗಿರೀಶನು ಮಟ್ಕಾ ಜೂಜಾಟಕ್ಕೆ ಸಂಗ್ರಹಿಸಿದ ಹಣ ನಗದು ರೂ. 1800/-, ಮಟ್ಕಾ ನಂಬ್ರ ಬರೆದ ಚೀಟಿ -1, ಹಾಗೂ ಒಂದು ಬಾಲ್ ಪೆನ್ ಅನ್ನು ಸ್ವಾಧೀನ ಪಡಿಸಿಕೊಂಡಿರುತ್ತಾರೆ.
- ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ 78 (I) (III) KP ACT ಐಪಿಸಿಯಂತೆ ಪ್ರಕರಣ ದಾಖಲಾಗಿದೆ.