
ಕಾಪು: ದಿನಾಂಕ:15-09-2023(ಹಾಯ್ ಉಡುಪಿ ನ್ಯೂಸ್) ದೆಂದೂರುಕಟ್ಟೆ ಪರಿಸರದಲ್ಲಿ ಮರಳು ಕಳ್ಳ ಸಾಗಾಣಿಕೆ ನಡೆಸುತ್ತಿದ್ದ ಮೂವರನ್ನು ಕಾಪು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಬ್ದುಲ್ ಖಾದರ್ ರವರು ಬಂಧಿಸಿದ್ದಾರೆ.
ಕಾಪು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ಕಾ, ಸು ಮತ್ತು ಸಂಚಾರ) ಅಬ್ದುಲ್ ಖಾದರ್ ರವರು ದಿನಾಂಕ 14/09/2023 ರಂದು ರೌಂಡ್ಸ್ ಕರ್ತವ್ಯದಲ್ಲಿ ಮಣಿಪುರ ಗ್ರಾಮದ ದೆಂದೂರುಕಟ್ಟೆಯ ಸಿಎಸ್ಐ ಕ್ರಿಸ್ತ ಮಹಿಮ ಚರ್ಚ್ ಎದುರು ತಲುಪುವಾಗ ಕುರ್ಕಾಲು ಕಡೆಯಿಂದ ದೆಂದೂರುಕಟ್ಟೆ ಕಡೆಗೆ ಬಂದ KA-20-AB-9807 ನಂಬ್ರದ ಟಾಟಾ 407 ವಾಹನದಲ್ಲಿ ಮರಳನ್ನು ಸಾಗಿಸುತ್ತಿರಬಹುದು ಎಂಬ ಅನುಮಾನದ ಮೇರೆಗೆ ವಾಹನವನ್ನು ನಿಲ್ಲಿಸಿ ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ 1 ½ ಮೆಟ್ರಿಕ್ ಟನ್ ತೂಕದ 9,000/- ರೂಪಾಯಿ ಬೆಲೆ ಬಾಳುವ ಮರಳನ್ನು ತುಂಬಿಸಿರುವುದು ಕಂಡು ಬಂದಿರುತ್ತದೆ ಎನ್ನಲಾಗಿದೆ.
ವಾಹನದಲ್ಲಿ ಚಾಲಕನಾಗಿ ನಜೀರ್ (42), ವಾಸ: ಕರಂಬಳ್ಳಿ ಜನತಾ ಕಾಲೋನಿ, ಶಿವಳ್ಳಿ ಗ್ರಾಮ, ಉಡುಪಿ ಎಂಬಾತನಾಗಿದ್ದು ಅವನ ಜೊತೆಗೆ 1)ಜೀವನ್ ಶೆಟ್ಟಿ (38), ವಾಸ: ಅರುಣ್ ಪೌಲ್ಟ್ರಿ ಫಾರ್ಮ್ ಬಳಿ, ಕುರ್ಕಾಲು, ಸುಭಾಸನಗರ 2) ಮಿಥುನ್ ಶೆಟ್ಟಿ (32) ,ವಾಸ: ಕುರ್ಕಾಲು, ಸುಭಾಸನಗರ ಅಂಚೆ, ಕುರ್ಕಾಲು , ಕಾಪು ಎಂಬವರಿದ್ದು ಇವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಜೀವನ್ ಶೆಟ್ಟಿ ಇತ್ತೀಚೆಗೆ ಪಾಂಗಾಳ ಹೊಳೆಯಲ್ಲಿ ಮರಳನ್ನು ತೆಗೆಸಿ ಅವರ ಜಾಗದಲ್ಲಿ ಸಂಗ್ರಹ ಮಾಡಿಟ್ಟು, ಅದನ್ನು ಮಾರಾಟ ಮಾಡಿ ಲಾಭ ಮಾಡುವ ಉದ್ದೇಶದಿಂದ ಮಿಥುನ್ ಶೆಟ್ಟಿಯ ಟೆಂಪೋದಲ್ಲಿ ತುಂಬಿಸಿ ದೆಂದೂರುಕಟ್ಟೆ ಕಡೆಗೆ ಮಾರಾಟ ಮಾಡಲು ಬಂದಿರುವುದಾಗಿ ಪೊಲೀಸ್ ವಿಚಾರಣೆ ಯಲ್ಲಿ ತಿಳಿಸಿರುತ್ತಾರೆ ಎನ್ನಲಾಗಿದೆ.
ಆರೋಪಿಗಳು ಸ್ವಂತ ಲಾಭಕ್ಕಾಗಿ ಸರ್ಕಾರಿ ಸ್ವತ್ತಾದ ಖನಿಜವನ್ನು ಕಳವು ಮಾಡಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದು ಮರಳು ಸಾಗಿಸುತ್ತಿದ್ದ KA-20-AB-9807 ನಂಬ್ರ 407 ಟೆಂಪೋವನ್ನು,ಅದರಲ್ಲಿದ್ದ 9,000/- ರೂಪಾಯಿ ಬೆಲೆಬಾಳುವ ಮರಳನ್ನು ಸ್ವಾಧೀನಪಡಿಸಿಕೊಂಡು ಮೂರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ. ಕಲಂ: 379 ಐಪಿಸಿ ಮತ್ತು ಕಲಂ: 4, 4(1ಎ), 21 MMRD ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.