- ಪಡುಬಿದ್ರಿ: ದಿನಾಂಕ 08-09-2023 (ಹಾಯ್ ಉಡುಪಿ ನ್ಯೂಸ್) ಕಾಪು ತಾಲೂಕಿನ ಸಾಂತೂರು ಗ್ರಾಮದ ಕಾಂಜರಕಟ್ಟೆ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯನ್ನು ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುದರ್ಶನ್ ದೊಡ್ಡಮನಿ ಯವರು ಬಂಧಿಸಿದ್ದಾರೆ.
- ,ಪಡುಬಿದ್ರಿ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ಸುದರ್ಶನ್ ದೊಡ್ಡಮನಿ ಅವರಿಗೆ ದಿನಾಂಕ: 05-09-2023ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ ಸಮಯ ಕಾಪು ತಾಲೂಕು ಸಾಂತೂರು ಗ್ರಾಮದ ಕಾಂಜರಕಟ್ಟೆ ರಾಧಾಕೃಷ್ಣ ಎಂಬುವವರ ಗೂಡಂಗಡಿ ಎದುರು ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸುತ್ತಿದ್ದಾನೆಂದು ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಕೂಡಲೇ ದಾಳಿ ಮಾಡಿದಾಗ ಮಟ್ಕಾ ಆಡಲು ಸೇರಿದ್ದ ಜನರು ಓಡಿ ಪರಾರಿಯಾಗಿದ್ದು, ಸಾರ್ವಜನಿಕರಿಂದ ಮಟ್ಕಾಜುಗಾರಿಗೆ ಹಣ ಸಂಗ್ರಹಿಸುತ್ತಿದ್ದ ರವಿ ಶೆಟ್ಟಿ (56), ವಾಸ: ಶ್ರೀ ಮಾತಾ ನಿಲಯ, ಎಲ್ಲೂರು ಗ್ರಾಮ, ಪಿಲಾರು ಅಂಚೆ, ಕಾಪು ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದು ಆತನು ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂಪಾಯಿ 10,010/- ಮಟ್ಕಾ ನಂಬ್ರ ಬರೆದ ಬಿಳಿ ಕಾಗದ-2, ಮತ್ತು ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
- ಆರೋಪಿ ರವಿ ಶೆಟ್ಟಿಯು ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ಹಣವನ್ನು ಮಟ್ಕಾ ಬುಕ್ಕಿ ಕಿಶೋರ್‌ಶೆಟ್ಟಿ (43), ವಾಸ: ಕಜೆಬೈಲು ಹೌಸ್, ಪಿಲಾರು ಗ್ರಾಮ, ಕಾಪು ಎಂಬಾತನಿಗೆ ನೀಡುತ್ತಿದ್ದು ಕಿಶೋರ್ ಶೆಟ್ಟಿ ಯು ಡ್ರಾ ಮಾಡಿ ವಿಜೇತರಿಗೆ ಹಣ ನೀಡುತ್ತಿದ್ದಾನೆ ಎನ್ನಲಾಗಿದೆ.
- ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ :78 (I)(a) (III) ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.