Spread the love

ಉಡುಪಿ: ದಿನಾಂಕ:05-09-2023 (ಹಾಯ್ ಉಡುಪಿ ನ್ಯೂಸ್) ನಗರದಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರಿ ಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಉಡುಪಿ ನಗರದಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು ರಾತ್ರಿಯ ಸಮಯದಲ್ಲಿ ಗಾಂಜಾ ವ್ಯಸನಿಗಳು ಕಳ್ಳತನ ನಡೆಸುತ್ತಿರುವ ಬಗ್ಗೆ ಸಂಶಯವನ್ನು ಸಾರ್ವಜನಿಕರು ವ್ಯಕ್ತ ಪಡಿಸಿದ್ದಾರೆ. ಇದೀಗ ಗಾಂಜಾ ವ್ಯಸನಕ್ಕಾಗಿ ಮನೆಗಳ ,ಅಂಗಡಿ, ಹೋಟೆಲ್ ಗಳ ನೀರಿನ ಮೀಟರ್ ಕಬ್ಬಿಣದ ವಸ್ತುಗಳನ್ನು ರಾತ್ರಿಯ ಸಮಯದಲ್ಲಿ ಮುರಿದು ಚಿಲ್ಲರೆ ಕಳ್ಳತನ ನಡೆಸುತ್ತಿದ್ದಾರೆ . ಕಳ್ಳರು ಗುಂಪಾಗಿ ತಿರುಗುತ್ತಿದ್ದು ಕಳ್ಳರಿಗೆ ಪೊಲೀಸರ ಭಯ ಇಲ್ಲವಾಗಿದ್ದು ,ಇದು ಹೀಗೆಯೇ ಮುಂದುವರೆದರೆ ಕಳ್ಳರು ದೊಡ್ಡ ಮಟ್ಟದಲ್ಲಿ ಕಳ್ಳತನ ನಡೆಸಲು ಸಜ್ಜಾಗುತ್ತಾರೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಹ್ರದಯ ಭಾಗವಾದ ಅಜ್ಜರಕಾಡು,ಕಾಡುಬೆಟ್ಟು ಪರಿಸರದಲ್ಲಿ ಹಲವು ಅಂಗಡಿ,ಮನೆ, ಹೋಟೆಲ್ ಗಳಲ್ಲಿ ಕಳ್ಳತನ ನಡೆದಿದೆ ಎನ್ನಲಾಗಿದ್ದು ರಾತ್ರಿ ಪೊಲೀಸರು ಗಸ್ತು ನಡೆಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸರು ಇನ್ನಾದರೂ ಎಚ್ಚೆತ್ತುಕೊಂಡು ರಾತ್ರಿ ಪೊಲೀಸ್ ಗಸ್ತನ್ನು ಬಿಗು ಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

error: No Copying!