Spread the love

ಉಡುಪಿ: ದಿನಾಂಕ:03-08-2023(ಹಾಯ್ ಉಡುಪಿ ನ್ಯೂಸ್) ಉಡುಪಿ ಹಳೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಯುವಕನೋರ್ವನಿಗೆ ಗಂಭೀರ ಹಲ್ಲೆ ನಡೆಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡಬಿದ್ರಿ, ಪಾಲಡ್ಕ, ರಾಮಮೋಹನ ನಗರ ನಿವಾಸಿ ನಿಖಿಲ್ ಕುಮಾರ್ (27) ಎಂಬವರು ಉಡುಪಿಯ ಉಜ್ವಲ್ ಬಾರ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ತಮಿಳುನಾಡು ಮೂಲದ ಪವನ್ (36) ಎಂಬಾತನು ಬಾರ್ ಗೆ ದಿನಾಲೂ ಊಟ ಮಾಡಲು ಬರುತ್ತಿದ್ದುದರಿಂದ ನಿಖಿಲ್ ಕುಮಾರ್ ರಿಗೆ ಪರಿಚಯದವನಾಗಿದ್ದನು ಎನ್ನಲಾಗಿದೆ.

ದಿನಾಂಕ 01/09/2023 ರಂದು ನಿಖಿಲ್ ಕುಮಾರ್ ಬಾರ್ ನಲ್ಲಿ ಕೆಲಸದಲ್ಲಿರುವಾಗ ಉಡುಪಿಯ ಹಳೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಯಾರೋ ಪವನ್ ನಿಗೆ ಹಲ್ಲೆ ಮಾಡುತ್ತಿರುವ ವಿಚಾರ ತಿಳಿದು, ನಿಖಿಲ್ ಕುಮಾರ್ ಸ್ಥಳಕ್ಕೆ ಬಂದಾಗ ಆಪಾದಿತರಾದ ಸುನೀಲ್ ಶೆಟ್ಟಿ ಹಾಗೂ ಭರತ್ ಭೂಷಣ್ ಪೈ ಎಂಬವರು ಪವನ್ ನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಸುನೀಲ್ ಶೆಟ್ಟಿಯು ತನ್ನಲ್ಲಿದ್ದ ಕಬ್ಬಿಣದ ರಾಡ್ ನಿಂದ ಕೊಲ್ಲುವ ಉದ್ದೇಶದಿಂದ ಪವನ್ ತಲೆಗೆ ರಕ್ತ ಬರುವಂತೆ ಹೊಡೆದು ಗಾಯಗೊಳಿಸಿದ್ದು, ಭರತ್ ಭೂಷಣ್ ಪೈಯು ಪವನ್ ನಿಗೆ ಕಾಲಿನಿಂದ ತುಳಿದಿದ್ದಲ್ಲದೆ ಜೀವ ಬೆದರಿಕೆ ಹಾಕಿ ಪರಾರಿಯಾಗಿರುತ್ತಾರೆ ಎಂದು ನಿಖಿಲ್ ಕುಮಾರ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 323,  504, 506, 307 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.   

error: No Copying!