ಉಡುಪಿ: ದಿನಾಂಕ:26-08-2023(ಹಾಯ್ ಉಡುಪಿ ನ್ಯೂಸ್) ಉಡುಪಿ ಜಿಲ್ಲಾ ಆಸ್ಪತ್ರೆಯ ಕಟ್ಟಡದ ಒಳಗಿನ ಕಾರಿಡಾರಿನಲ್ಲಿ ಗಲಾಟೆ, ಹೊಡೆದಾಟ ನಡೆಸುತ್ತಿದ್ದ ಯುವಕರನ್ನು ಉಡುಪಿ ನಗರ ಪೊಲೀಸ್ ಠಾಣೆಯ ಎಎಸ್ಐ ಯವರಾದ ತಾರಾನಾಥ ರವರು ಬಂಧಿಸಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆಯ ಎಎಸ್ಐ ಯವರಾದ ತಾರಾನಾಥ ರವರು ದಿನಾಂಕ: 25/08/2023 ರಂದು ಠಾಣಾ ಸರಹದ್ದಿನಲ್ಲಿ ಹೊಯ್ಸಳ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಠಾಣಾಧಿಕಾರಿಯವರು ಕರೆ ಮಾಡಿ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ಕಾರಿಡಾರಿನಲ್ಲಿ 3 ಜನ ಗಲಾಟೆ ಮಾಡುತ್ತಿರುವುದಾಗಿ ತಿಳಿಸಿದ್ದು, ಎಎಸ್ಐ ತಾರಾನಾಥ ರವರು ಕೂಡಲೇ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋದಾಗ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಪುರುಷರ ಸರ್ಜಿಕಲ್ ವಾರ್ಡಿನ ಹತ್ತಿರ ಸಾರ್ವಜನಿಕ ಕಾರಿಡಾರ್ ಬಳಿ ಆಪಾದಿತರಾದ 1) ಮೊಹಮ್ಮದ್ ಅಬ್ದುಲ್ ಅಜೀಜ್ (29) ವಾಸ:ಎಸ್.ಎಂ.ಎಸ್ ಮಂಜಿಲ್, ಮಲ್ಲಾರು ಅಂಚೆ , ಕಾಪು 2) ಮೊಹಮ್ಮದ್ ನಾಜೀಮ್ (36) ವಾಸ: ಪೈಯಾರ್ ಹೌಸ್, ಗುಡ್ಡೆಕೇರಿ, ಮಲ್ಲಾರು, ಕಾಪು 3) ಇಮ್ತಿಯಾಜ್ (40) ವಾಸ: ಇನ್ನಂಜೆ ಗ್ರಾಮ, ಕಾಪು ಪರಿಸರದ ಈ ಮೂವರು ತಮ್ಮೊಳಗೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಪರಸ್ಪರ ದೂಡಾಡಿ ಕೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳಿಗೆ ಭಯದ ವಾತಾವರಣ ಉಂಟುಮಾಡುತ್ತಿದ್ದರು ಎಂದು ದೂರಿದ್ದಾರೆ.
ಈ ಮೂವರಿಗೆ ತಿಳುವಳಿಕೆ ನೀಡಿದರೂ ಪರಸ್ಪರ ಬೈದಾಡುತ್ತಾ ದೂಡಾಡಿಕೊಂಡು ಕೈ-ಕೈ ಮಿಲಾಯಿಸುತ್ತಿರುವುದನ್ನು ನೋಡಿ ಒಂದನೇ ಆರೋಪಿ ಮೊಹಮ್ಮದ್ ಅಬ್ದುಲ್ ಅಜೀಜ್ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದಿದ್ದು 3ನೇ ಆಪಾದಿತ ಇಮ್ತಿಯಾಜ್ ನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ ಎನ್ನಲಾಗಿದೆ. 2ನೇ ಆಪಾದಿತ ಮೊಹಮ್ಮದ್ ನಾಜೀಮ್ ನನ್ನು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದ ಬಳಿಕ ಠಾಣೆಗೆ ಬಂದು ಹಾಜರಾಗುವಂತೆ ತಿಳಿಸಿ ಪೊಲೀಸು ನೋಟೀಸು ನೀಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 160 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.