Spread the love

ಧರ್ಮಸ್ಥಳ ಎಂಬುದು ಹೊಸ ಹೆಸರು. ಇಲ್ಲಿನ ಮೂಲ ಹೆಸರು ಕುಡುಮ ಅಥವಾ ಕುಡುಮಪುರ. ಇಲ್ಲಿ ಶತಶತಮಾನಗಳ ಹಿಂದೆಯೇ ಅನ್ಯಾಯ, ಅಧರ್ಮ ನಡೆದಿದೆ, ಆರಂಭವಾಗಿದೆ. ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಅರ್ಚಕರೂ, ಟ್ರಸ್ಟಿಯೂ, ಸನ್ಯಾಸಿಯೂ ಆಗಿದ್ದವರೊಬ್ಬರನ್ನು ಶತಶತಮಾನಗಳ ಹಿಂದೆ ಉಪ್ಪಿನಂಗಡಿ ಕಡೆಯ ಪಾಳೆಗಾರರು ಅಧಿಕಾರ ಸ್ಥಾಪನೆಗಾಗಿ ಹತ್ಯೆ ಮಾಡಿಸಿದರು. ಬಳಿಕ ತಮ್ಮ ವಾಸ್ತವ್ಯವವನ್ನು ಸಹ ಕುಡುಮಕ್ಕೆ ಖಾಯಂ ಆಗಿ ಸ್ಥಳಾಂತರಿಸಿದರು. ಕುಡುಮದಲ್ಲಿ ಪಾಳೆಗಾರರ ಅನ್ಯಾಯಕ್ಕೆ ಸಡ್ಡು ಹೊಡೆದ ಮೊತ್ತ ಮೊದಲ ಈ ವ್ಯಕ್ತಿ , ಸ್ಥಾನಿಕ ಶಿವ ಬ್ರಾಹ್ಮಣರಾದ ನಟ್ಟೋಜ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇವರ ಹೆಸರೇ ಅಣ್ಣಯ್ಯ ಸ್ವಾಮೀ ಅಥವಾ ಅಣ್ಣಪ್ಪ ಸ್ವಾಮೀ. ಈ ವ್ಯಕ್ತಿಯೇ ಬಳಿಕ ಒಂದು ಮಹಾಶಕ್ತಿಯಾಗಿ ಮಾರ್ಪಟ್ಟಿತು.
(ಮುಂದುವರಿಯುವುದು)
~ ಶ್ರೀರಾಮ ದಿವಾಣ, ಮೂಡುಬೆಳ್ಳೆ.

error: No Copying!