Spread the love
  • ಕೋಟ: ದಿನಾಂಕ 18/08/2023 (ಹಾಯ್ ಉಡುಪಿ ನ್ಯೂಸ್) ಕುಂದಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಮೊಳಹಳ್ಳಿ ಗ್ರಾಮದ ಮಾಸ್ತಿ ಕಟ್ಟೆ ಬಳಿಯ ಹಾಡಿಯಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಮೂವರನ್ನು ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುಬ್ಬಣ್ಣ ಬಿ ಅವರು ಬಂಧಿಸಿದ್ದಾರೆ.
  • ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಸುಬ್ಬಣ್ಣ ಬಿ ಅವರು ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ದಿನಾಂಕ 16/08/2023 ರ ಬೆಳಗಿನ ಜಾವ ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಮಾಸ್ತಿ ಕಟ್ಟೆ ಬಳಿ ಉದಯ ಶೆಟ್ಟಿ ಎಂಬವರ ಕಟ್ಟಡದ ಹಿಂಭಾಗದ ಹಾಡಿ ಪ್ರದೇಶದಲ್ಲಿ ಹಲವು ಜನರು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದಾರೆಂದು ಸಾರ್ವಜನಿಕರಿಂದ ಬಂದ ಮಾಹಿತಿ ಮೇರೆಗೆ ಕೂಡಲೇ ಸ್ಥಳಕ್ಕೆ  ತೆರಳಿ ಇಸ್ಪೀಟು ಜುಗಾರಿ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿ ಇಸ್ಪಿಟು ಜುಗಾರಿ ಆಟ ಆಡುತ್ತಿದ್ದ  ಆರೋಪಿಗಳಲ್ಲಿ 3 ಜನ 1) ಮುನಾಫ್‌ (33), ವಾಸ: ಟಿ ಟಿ ರೋಡ್‌ ಕುಂದಾಪುರ ಉಡುಪಿ ಜಿಲ್ಲೆ,, 2)  ಪವನ್‌ (19), ವಾಸ: ಮಸೀದಿ ಹತ್ತಿರ ಕಾಪು ಉಡುಪಿ 3) ಕೊಟ್ರೇಶ್‌ ಸರೋಣ (33), ಕೂನೆಬೆಳಕೆರೆ ಗ್ರಾಮ ಹರಿಹರ ತಾಲೂಕು ದಾವಣಗೆರೆ ಜಿಲ್ಲೆ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳಾದ 4) ಉದಯ ಶೆಟ್ಟಿ ಮೊಳಹಳ್ಳಿ, 5) ವಿಜಯ ಮೊಳಹಳ್ಳಿ, 6) ರಘುರಾಮ ಶೆಟ್ಟಿ ಮೊಳಹಳ್ಳಿ, 7) ಗಣೇಶ್‌ ಮೊಳಹಳ್ಳಿ, 8) ಮಂಜು ದೊಣಿ, ಹರಿಹರ ತಾಲೂಕು ದಾವಣಗೆರೆ ಜಿಲ್ಲೆ, 9) ಅಕ್ಷಯ ಮುಲ್ಕಿ, 10) ಮೊಹೀದ್‌ ಕಾರ್ನಾಡ್‌, 11) ಶೇಖರ, 12) ವಿಘ್ನೇಶ್‌ ದೇವಾಡಿಗ ಮತ್ತು ಇತರರು ದಾಳಿಯ ಸಮಯ ಓಡಿ ಹೋಗಿದ್ದು, ಜುಗಾರಿ ಆಟಕ್ಕೆ ಬಳಸಿದ ಡೈಮಾನ್‌ ,ಆಟಿನ್‌. ಇಸ್ಪೀಟ್‌, ಕಳವಾರ್‌ ಚಿತ್ರಗಳಿರುವ 52 ಇಸ್ಪೀಟ್‌ ಎಲೆಗಳು, ಹಳೇಯ ನ್ಯೂಸ್ ಪೇಪರ್-2, VIVO ಕಂಪೆನಿಯ ಮೊಬೈಲ್‌ -4, ಸ್ಯಾಮ್‌ಸಾಂಗ್‌ ಕಂಪೆನಿ ಮೊಬೈಲ್‌ 1 ,APPO ಕಂಪೆನಿ ಮೊಬೈಲ್‌ -1, ಐ ಪೋನ್ ಮೊಬೈಲ್‌ -1,ರೆಡ್ ಮೀ ಕಂಪೆನಿಯ ಮೋಬೈಲ್-1,ಒಟ್ಟು ನಗದು ರೂಪಾಯಿ 71,570/- ಸ್ಥಳದಲ್ಲಿ ದೊರೆತಿದ್ದು ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ.
  • ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

error: No Copying!