
ಧರ್ಮಸ್ಥಳ ಗ್ರಾಮದ ಕ್ರೂರ ಪಾಳೆಗಾರರ, ಶೋಷಕರ ವಿರುದ್ಧ ಹೋರಾಟ ನಡೆಯುತ್ತಿರುವುದು ಇದು ಮೊದಲಲ್ಲ. ಕೆಲ ದಶಕಗಳ ಹಿಂದಿನಿಂದಲೇ ಇಲ್ಲಿ ನಿರಂತರವಾಗಿ ಶೋಷಣೆಗೀಡಾದ, ದೌರ್ಜನ್ಯಕ್ಕೀಡಾದ, ಒಕ್ಕಲುದಾರರ, ಗೇಣಿದಾರರ, ರೈತರ, ಕೂಲಿಕಾರರ, ಅತ್ಯಾಚಾರಕ್ಕೀಡಾಗಿ ಬಲಿಯಾದ ಹೆಣ್ಮಕ್ಕಳ ಪರವಾಗಿ ಅಂದಂದಿನ ಧೈರ್ಯಶಾಲಿ ಜನಪರ ಹೋರಾಟಗಾರರು ನಿಸ್ವಾರ್ಥತೆಯಿಂದ, ತ್ಯಾಗಪೂರ್ಣವಾದ ಹೋರಾಟಗಳನ್ನು ನಡೆಸಿದ್ದಾರೆ. ಆದರೆ ಜನಪರ ಹೋರಾಟಕ್ಕೆ ಬೆಂಬಲ ನೀಡದ ದೊಡ್ಡ ಸಂಖ್ಯೆಯ ಜನರು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಕ್ರೂರಿಗಳನ್ನೇ ಬೆಂಬಲಿಸುತ್ತಾಬಂದರು. ಈಗಲೂ ಇವರನ್ನು ಬೆಂಬಲಿಸುವವರು ಇದ್ದಾರೆ. ಆದರೆ ಇವರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ.
(ಮುಂದುವರಿಯುವುದು)
~ ಶ್ರೀರಾಮ ದಿವಾಣ , ಮೂಡುಬೆಳ್ಳೆ.