Spread the love

ಉಡುಪಿ: ದಿನಾಂಕ:13-08-2023 (ಹಾಯ್ ಉಡುಪಿ ನ್ಯೂಸ್) ಸಂತೆಕಟ್ಟೆ ನಾಯಕ್ ಮೆಡಿಕಲ್ ಮುಂಭಾಗದಲ್ಲಿ ಯುವಕನೋರ್ವ ಬೈಕ್ ಪಾರ್ಕ್ ಮಾಡಿದ ವಿಷಯಕ್ಕೆ ಕಾರಿನಲ್ಲಿ ಬಂದ ಪತಿ ಹಾಗೂ ಆತನ ಪತ್ನಿ ಯುವಕನಿಗೆ ಆಯುಧವೊಂದರಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಬಗ್ಗೆ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ.

ಮಟ್ಟು ಗ್ರಾಮ, ಮಟ್ಟು ಯುವಕ ಮಂಡಲದ ಬಳಿಯ ನಿವಾಸಿ ಪ್ರಶಾಂತ್ ಜೆ ಕುಮಾರ್ (37) ಎಂಬವರು ತನ್ನ ಮೋಟಾರ್‌ ಸೈಕಲ್‌ ನಂಬ್ರ KA-20 EK-9672 ನೇದರಲ್ಲಿ ಬಂದು ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆ ನಾಯಕ್‌ ಮೆಡಿಕಲ್‌ ಎದುರು ಬೈಕ್‌ ನ್ನು ಪಾರ್ಕ್‌ ಮಾಡುವಾಗ EON ಕಾರು ನಂಬ್ರ KA-19 MH-1141 ನೇದರಲ್ಲಿ ಬಂದ ವ್ಯಕ್ತಿ ಯೋರ್ವ ನು ಪ್ರಶಾಂತ್‌ ಜೆ ಕುಮಾರ್‌ ರವರಿಗೆ ಬೈದು ಬೈಕ್‌ ಮುಂದಕ್ಕೆ ಇಡುವಂತೆ ಹೇಳಿದಂತೆ ಪ್ರಶಾಂತ್‌ ಜೆ ಕುಮಾರ್‌ ರವರು ಮುಂದಕ್ಕೆ ಬೈಕ್‌ ಇಟ್ಟು, ಮೆಡಿಕಲ್‌ಗೆ ಹೋಗಿ ವಾಪಾಸು ಬಂದಾಗ EON ಕಾರು ಚಾಲಕ ಮತ್ತು ಆತನ ಹೆಂಡತಿ ಅವಾಚ್ಯ ಶಬ್ದಗಳಿಂದ ಬೈದು, ಬೈಕ್‌ ಚಲಾಯಿಸಲು ಮುಂದಾದ ಪ್ರಶಾಂತ್‌ ಜೆ ಕುಮಾರ್‌ ರವರನ್ನು ಇಬ್ಬರೂ ಆಪಾದಿತರು ಸೇರಿ ತಡೆದು ನಿಲ್ಲಿಸಿ, ಕಾರು ಚಾಲಕನು ಯಾವುದೋ ಆಯುಧದಿಂದ ಪ್ರಶಾಂತ್‌ ಜೆ ಕುಮಾರ್‌ ರವರ ತಲೆಯ ಹಿಂಬದಿಗೆ ಹಲ್ಲೆ ಮಾಡಿ ಗಾಯಗೊಳಿಸಿದ್ದಲ್ಲದೆ,  ಏನು ಬೇಕಾದರೂ ಮಾಡು, ನಾನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿರುತ್ತಾನೆ ಎಂದು ಪ್ರಶಾಂತ್ ಜೆ ಕುಮಾರ್ ರವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 341, 324, 504, 506 RW 34  ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!