Spread the love
  • ಮಣಿಪಾಲ: ದಿನಾಂಕ:11-08-2023 (ಹಾಯ್ ಉಡುಪಿ ನ್ಯೂಸ್) ಮಹಿಳೆಯೋರ್ವರ ಬ್ಯಾಂಕ್ ಖಾತೆಯಿಂದ ಯಾರೋ ಕಳ್ಳರು UPI ಮುಖಾಂತರ ಮೋಸದಿಂದ ಹಣ ಕಳ್ಳತನ ನಡೆಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
  • ಕೆ. ಅನಿತಾ  (53) ವಾಸ : ಪ್ರನ್ಸೆಸ್‌ ಪ್ಲ್ಯಾಟ್‌ ,ಅನಂತ ಕಲ್ಯಾಣ ನಗರ, ಎಂಬವರು ಉಡುಪಿ ನೇತಾಜಿ ರಸ್ತೆ ಬಳಿ ಇರುವ SBI ಬ್ಯಾಂಕ್‌ನಲ್ಲಿ  ಎಸ್‌.ಬಿ. ಖಾತೆ ಹೊಂದಿದ್ದು, ಅವರ ಎಸ್‌.ಬಿ.  ಖಾತೆಯಿಂದ ದಿನಾಂಕ  14.07.2023 ರಿಂದ 02.08.2023 ರ  ನಡುವಿನ ಅವಧಿಯಲ್ಲಿ  ಒಟ್ಟು ರೂ. 1,84,100/- ಹಣವನ್ನು ಯಾರೋ ಕಳ್ಳರು ಕೆ.ಅನಿತಾರವರ ಗಮನಕ್ಕೆ ಬಾರದೇ UPI ಮೂಲಕ ಕಳ್ಳತನ  ಮಾಡಿ ಕೆ.ಅನಿತಾರವರಿಗೆ ಮೋಸ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • . ಈ ಬಗ್ಗೆ  ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ 66(ಸಿ) (ಡಿ) ಐ.ಟಿ. ಕಾಯಿದೆ.ಮತ್ತು ಕಲಂ 419, 420  ಐಪಿಸಿ. ಯಂತೆ ಪ್ರಕರಣ ದಾಖಲಾಗಿದೆ.
error: No Copying!