Spread the love

ಕಾರ್ಕಳ: ದಿನಾಂಕ:08-08-2023 (ಹಾಯ್ ಉಡುಪಿ ನ್ಯೂಸ್) ಮಿಯ್ಯಾರು ಗ್ರಾಮದ ನೆಲ್ಲಿಗುಡ್ಡೆಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನನ್ನು ಕಾರ್ಕಳ ನಗರ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಸಂದೀಪ್ ಕುಮಾರ್ ಶೆಟ್ಟಿಯವರು ಬಂಧಿಸಿದ್ದಾರೆ.

ಕಾರ್ಕಳ ನಗರ ಪೊಲೀಸ್‌ ಠಾಣೆ ಪಿಎಸ್ಐ ಯವರಾದ ಸಂದೀಪ್ ಕುಮಾರ್ ಶೆಟ್ಟಿಯವರು ದಿನಾಂಕ 06/08/2023 ರಂದು ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ನೆಲ್ಲಿಗುಡ್ಡೆಯ ಕಂಬಳ ನಡೆಯುವ ಸ್ಥಳದ ಬಳಿ ತಲುಪಿದಾಗ ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕ ವಸ್ತು ಗಾಂಜಾವನ್ನು ಪೇಪರ್‌ನಲ್ಲಿ ಸೇರಿಸಿ ಸಿಗರೇಟ್ ನಂತೆ ರೋಲ್ ಮಾಡಿ  ಸೇದುತ್ತಿದ್ದ ಆಪಾದಿತ ವೇಲುಮುರುಗನ್‌ ಎಂಬವನನ್ನು ಬಂಧಿಸಿ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ದಿನಾಂಕ: 07/08/2023 ರಂದು ಆಪಾದಿತನು ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವುದಾಗಿ ವೈದ್ಯಕೀಯ ವರದಿಯು ಬಂದಿರುತ್ತದೆ ಎನ್ನಲಾಗಿದೆ .

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ 27(b)NDPS  Act ನಂತೆ ಪ್ರಕರಣ ದಾಖಲಾಗಿದೆ.

error: No Copying!